ಉಜಿರೆ: ಸ್ವಯಂ ನಿವೃತ್ತಿ ಪಡೆದ ನಿರಂಜನ ಶೆಟ್ಟ ರವರಿಗೆ ಬೀಳ್ಕೊಡುಗೆ ಸಮಾರಂಭ

ಉಜಿರೆ:  ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಜಿರೆ  ಶಾಖೆಯಲ್ಲಿ ಸುಧೀರ್ಘ 17   ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಉಜಿರೆಯ ನಿರಂಜನ ಶೆಟ್ಟಿ ಅವರನ್ನು  ಶಾಖಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲು ,  ಹಾರ ತೊಡಿಸಿ ,ಸ್ಮರಣಿಕೆ ನೀಡಿ  ಸನ್ಮಾನಿಸಿ  ಹಾರ್ದಿಕವಾಗಿ ಬೀಳ್ಕೊಡಲಾಯಿತು.

ನಿವೃತ್ತ ಮ್ಯಾನೇಜರ್ ಶ್ರೀನಿವಾಸ ತಂತ್ರಿ, ಜಯಂತ ಶೆಟ್ಟಿ ಕುಂಟಿನಿ  ಮತ್ತು ಮಂಜುನಾಥ ಶೆಟ್ಟಿ ರವರು ನಿರಂಜನ ಶೆಟ್ಟಿ ಯವರ  ಪ್ರಾಮಾಣಿಕ ಸೇವೆ, ಕರ್ತವ್ಯ ನಿಷ್ಠೆ ಮತ್ತು ಜನಾನುರಾಗ, ಸರಳ ಸೌಜನ್ಯದ ನಡೆನುಡಿಯಿಂದ ಎಲ್ಲರೊಂದಿಗೂ ಆತ್ಮೀಯರಾಗಿದ್ದು,  ಸಂಘದ ಅಭಿವೃದ್ಧಿಯಲ್ಲಿ  ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ನಿವೃ ತ್ತ ಜೀವನ ಆರೋಗ್ಯಪೂರ್ಣ ಹಾಗು ಸುಖಕರವಾಗಿರಲಿ ಎಂದು  ಅಭಿನಂದಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಕೃಷ್ಣಪ್ರಸಾದ್ ಉಡುಪ, ಸಿಬ್ಬಂದಿಗಳಾದ ಸುರೇಖಾ ಬಿ., ವಾಣಿಶ್ರೀ, ಸುವೀನ್ ಶೆಟ್ಟಿ ,  ಉಪೇಂದ್ರ ಆಚಾರ್,   ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.