ಕೊರಂಜ ಶಾಲೆಯಲ್ಲಿ ಆಂಗ್ಲ ಭಾಷೆಯ ತರಗತಿ ಪ್ರಾರಂಭ

ಗೇರುಕಟ್ಟೆ : ಇಲ್ಲಿಯ ಸರಕಾರಿ ಉನ್ನತಿಕರಸಿದ ಹಿರಿಯ ಪ್ರಾಥಮಿಕ ಶಾಲೆ ಆಂಗ್ಲ ಮಾಧ್ಯಮ ತರಗತಿ ಮತ್ತು 1ರಿಂದ 5ನೇ ತರಗತಿಯ ಮಕ್ಕಳ ತರಗತಿ ಪ್ರಾರಂಭವನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಪ್ರಭಾಕರ ರಾವ್ ದೀಪ ಪ್ರಜ್ವಲಿಸುವ ಮೂಲಕ ಅ.25 ರಂದು ಚಾಲನೆ ನೀಡಿದರು.
ನೂತನ ಕಟ್ಟಡದಲ್ಲಿ ಆಂಗ್ಲ ಭಾಷೆಯ ಎರಡು ತರಗತಿ ಕೊಠಡಿಗಳನ್ನು ಹೊಂದಿದೆ. ಗಣ್ಯರು,ಶಿಕ್ಷಕರು,ಮೇಲುಸ್ತುವಾರಿ ಸಮಿತಿ ಸದಸ್ಯರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದು ಕೊಠಡಿ ಉದ್ಘಾಟಿಸಿದರು.
ಶಾಲೆಯ ಹಿರಿಯ ವಿಧ್ಯಾರ್ಥಿಗಳಾದ ಪಶುವೈದ್ಯ ಅನುದಿಪ್ ಎಸ್.ಅರ್.ನಾೈಕ್,ಭಾರತೀಯ ವಾಯುಸೇನೆ ಸೈನಿಕ ಪ್ರಮೋದ್ ಗೌಡ, ಬದ್ಯಾರು ಸಘ್ವಾ ಧರ್ಮ ಗುರು ಸಂಶೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮೇಲುಸ್ತುವಾರಿ ಸಮಿತಿ ಅಧ್ಯಕ್ಷ,ಕಳಿಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಬಿ ಮಾತನಾಡುತ್ತಾ ಶಾಲೆಯ ಯಶಸ್ವಿಗಾಗಿ ಸಹಕರಿಸಿದ ಎಲ್ಲಾ ವಿಧ್ಯಾಭಿಮಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಯಶೋಧರ ಶೆಟ್ಟಿ ಮಾಣಿಕ್ಯ, ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶೇಖರ ಗೌಡ ಎಮ್, ಸಿದ್ದಿಕ್,ಅಬ್ಬುಬಕ್ಕರ್ ಸಿದ್ದಿಕ್,ಅಬ್ದುಲ್ ಖಾದರ್,ಶ್ರೀಮತಿ ಪ್ರೇಮಾ ಶ್ರೀಮತಿ ವನಿತಾ,ಶ್ರೀಮತಿ ಶಾಲಿನಿ,ಶ್ರೀಮತಿ ಕುಲ್ಸುಮ,ಶ್ರೀಮತಿ ನಝೀಮಾ,ಮತ್ತು ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರವಿ ರಾಜ್ ಗೌಡ, ಸಹ ಶಿಕ್ಷಕಿಯಾರಾದ ವನಜ ಕುಮಾರಿ ಬಿ, ಅನುರಾಧ ಬಿ.ಸಿ, ಅಮಿತಾ ಎ, ಶ್ರೀವಿದ್ಯಾ ಪಿ, ಪೋಷಕರು, ಹಿರಿಯ ವಿಧ್ಯಾರ್ಥಿಗಳು ಹಾಗೂ ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಶಾಲಾ ಸಹ ಶಿಕ್ಷಕಿ ಸಿಬುಲ್ ಪೈಾಸ್ ಸ್ವಾಗತಿಸಿ, ಜಾನಕಿ ಪಟಗಾರ್ ಕಾರ್ಯಕ್ರಮ ನಿರ್ವಹಿಸಿ,ಮುಖ್ಯ ಶಿಕ್ಷಕಿ ಶಾಂತ ಎಸ್.ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.