ಗುರುವಾಯನಕೆರೆಯಿಂದ ಉಜಿರೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣ ನಡೆಸದಂತೆ ವರ್ತಕರ ಸಂಘದಿಂದ ಮನವಿ

ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಜಿರೆಯವರೆಗೆ ಚತುಷ್ಪಥ-ದ್ವಿಪಥ ರಸ್ತೆಗೆ ನಿರ್ಮಾಣದ ಬಗ್ಗೆ  ಆಕ್ಷೇಪ ವ್ಯಕ್ತಪಡಿಸಿ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಬೆಳ್ತಂಗಡಿ ಪಟ್ಟಣ ಪಂಚಾಯತಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.

ಚತುಷ್ಪತ/ದ್ವಿಪಥ ರಸ್ತೆಗೆ ನಿರ್ಮಾಣದ ಬಗ್ಗೆ ಪ್ರಸ್ತಾವನೆಗಳನ್ನು  ವಿವಿಧ ಪತ್ರಿಕೆಗಳ ಮೂಲಕ ಗಮನಿಸುತ್ತಿದ್ದು, ಅಧಿಕೃತವಾಗಿ ಯಾವುದೇ ಪ್ರಸ್ತಾವನೆಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಈಗಾಗಲೇ ಸಮಸ್ತ ವ್ಯಾಪಾರಿ ವರ್ಗದವರು ವಿಶ್ವವ್ಯಾಪಿ ಕೊರೊನಾ ಸಾಂಕ್ರಾಮಿಕದಿಂದ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದು, ಚತುಷ್ಪತ ನಿರ್ಮಾಣದಲ್ಲಿ ಎಲ್ಲರ ಮೇಲೆ  ಬರೆ ಎಳೆದಂತೆ ಆಗುತ್ತದೆ.

ನಾವು ಅಭಿವೃದ್ಧಿಯ ವಿರುದ್ಧವಲ್ಲ. ಈ ಪ್ರಸ್ತಾವನೆಯಿಂದ ವ್ಯಾಪರಿಗಳೊಂದಿಗೆ, ಕಟ್ಟಡ ಮಾಲಿಕರಿಗೂ ಕೂಡಾ ಬಹಳಷ್ಟು ಕಷ್ಟ ನಷ್ಟಗಳೂ ಆಗಲಿವೆ. ಆದ್ದರಿಂದ ಪ್ರಸ್ತುತ ವಿದ್ಯಾಮಾನದಲ್ಲಿ ಕೆಲವು ವರ್ಷಗಳ ಮಟ್ಟಿಗೆ ದ್ವಿಪಥ ರಸ್ತೆಯೇ ಸೂಕ್ತವಾಗಿದ್ದು,  ಈಗ ಇರುವ ವಾಹನ ಸಾಂದ್ರತೆಗೆ (ಮುಂದಿನ ಹತ್ತು ವರ್ಷಗಳವರೆಗೆ) ದ್ವಿಪಥಕ್ಕೆ ಮಾತ್ರ ಸೂಕ್ತವಾಗಿರುತ್ತದೆ. ಚತುಷ್ಪಥಕ್ಕೆ ಬೇಕಾಗುವ ವಾಹನ ಸಾಂದ್ರತೆ ಈ ರಸ್ತೆಯಲ್ಲಿ ಇರುವುದಿಲ್ಲ. ಆದ್ದರಿಂದ ಚತುಷ್ಪಥ ರಸ್ತೆ ಮಾಡುವ ಪ್ರಾಸ್ತಾವನೆ ಇದ್ದಲ್ಲಿ ಇದರ ಬಗ್ಗೆ ನಮ್ಮಆಕ್ಷೇಪವಿರುತ್ತದೆ. ಯಾವುದೇ ಕಾರಣಕ್ಕೂ ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಚತುಷ್ಪಥದ ಅಗತ್ಯವಿರುವುದಿಲ್ಲ.  ಯಾವುದೇ ಚತುಷ್ಪಥದ ಪ್ರಸ್ತಾವನೆಯನ್ನು ನಾವು ವಿರೋಧಿಸುತ್ತೇವೆ. ಆದುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ  ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದರು .

ಈ ಸಂದರ್ಭದಲ್ಲಿ  ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ  ಸಂಸ್ಥೆಯ ಅಧ್ಯಕ್ಷ  ಪುಷ್ಪರಾಜ ಶೆಟ್ಟಿ, ಕಾರ್ಯದರ್ಶಿ ರೊನಾಲ್ಡ್  ಲೋಬೊ, ಕೋಶಾಧಿಕಾರಿ ಸುನೀಲ್ ಶೆಣೈ, ಇತರ ಪದಾಧಿಕಾರಿಗಳಾದ ರಾಜೇಶ್ ಶೆಟ್ಟಿ ಲಾಯಿಲ, ಶಶಿಧರ ಪೈ, ಜಗದೀಶ್ ಡಿ, ಯಶವಂತ ಪಟವರ್ಧನ್, ಶೀತಲ್ ಜೈನ್, ಗೊಡ್ವಿನ್ ಲೋಬೊ, ಭಾನು ಪ್ರಸನ್ನ, ಚಿದಾನಂದ ಇಡ್ಯ, ಲ್ಯಾನ್ಸಿ ಪಿರೇರಾ, ಯೇಸುದಾಸ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.