ಶಿರ್ಲಾಲು ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಶಿರ್ಲಾಲು: ಶಿರ್ಲಾಲು ಶಾಲೆಯಲ್ಲಿ 1ರಿಂದ 5ನೇ ತರಗತಿಗಳ ಪ್ರಾರಂಭೋತ್ಸವು ಅ.25 ರಂದು ಅದ್ದೂರಿಯಾಗಿ ನಡೆಯಿತು. ಶಾಲೆಯ ತರಗತಿಗಳನ್ನು ತಳಿರು ತೋರಣ, ಬಲೂನು ಹಾಗೂ ಹೂವಿನ ರಂಗೋಲಿಗಳಿಂದ ಅಲಂಕರಿಸಲಾಗಿದ್ದು, ಕೋವಿಡ್ ನಿಯಮಾನುಸಾರ ಬ್ಯಾಂಡ್ ವಾದ್ಯ, ಪನ್ನೀರು ಹಾಗೂ ಪುಷ್ಪವೃಷ್ಟಿ ಯೊಂದಿಗೆ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಂಡು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ಶಾಲೆಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಸ್ಟಾರ್ ನೀಡಿ ಅವುಗಳನ್ನು ಒಂದು ಕಡೆ ಅಂಟಿಸುವುದರ ಮೂಲಕ ಪುಟಾಣಿ ನಕ್ಷತ್ರಗಳ ಸಮ್ಮಿಲನ ಗೊಳಿಸಲಾಯಿತು ಜೊತೆಗೆ 1ರಿಂದ 5 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಪೆನ್ಸಿಲ್ ಹಾಗೂ ಮಾಸ್ಕ್ ಗಳನ್ನು ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ವಿದ್ಯಾರ್ಥಿಗಳ ಪಾಲಕ-ಪೋಷಕರು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.