ಸ್ಪಂದನಾ ಸೇವಾ ಸಂಘದಿಂದ ಮಲೆಬೆಟ್ಟು ನಿವಾಸಿ ಪ್ರಾರ್ಥನಾರಿಗೆ ವೈದ್ಯಕೀಯ ನೆರವು

ಉಜಿರೆ: ಕಳೆದ ಕೆಲವು ವರ್ಷಗಳಿಂದ ಕೆಂಪು ರಕ್ತ ಕಣಗಳ ಕೊರೆತೆಯಿಂದಾಗಿ “ತಲಸಿಮಿಯಾ” ಕಾಯಿಲೆಯಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮಲೆಬೆಟ್ಟು ಹೊಸವಕ್ಲು  ನಿವಾಸಿ ಜಯಾನಂದ ಗೌಡ ರವರ ಪುತ್ರಿ ಪ್ರಾರ್ಥನಾ ರವರು ಚಿಕಿತ್ಸೆ ಪಡೆಯುತ್ತಿದ್ದು, ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಚಿಕಿತ್ಸಾ ಸಹಾಯಾರ್ಥ ಸ್ಪಂದನಾ ಸೇವಾ ಸಂಘದ 52ನೇ ಸೇವಾ ಯೋಜನೆಯಡಿ ಧನಸಹಾಯವನ್ನು  ಹಸ್ತಾಂತರಿಸಲಾಯಿತು.

ಸ್ಪಂದನಾ ಸೇವಾ ಸಂಘದ ಸದಸ್ಯರಾದ ವೆಂಕಪ್ಪ ಗೌಡ ಕೊಡಂಗೆ ರವರ ಮೂಲಕ ರೂ 20,000/- ದ ಚೆಕ್ಕನ್ನು ಪ್ರಾರ್ಥನಾರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಕಾರ್ಯದರ್ಶಿ  ಮೋಹನ್ ಗೌಡ ಕೊಯ್ಯೂರು, ನಿರ್ದೇಶಕಿ  ಉಷಾದೇವಿ ಕಿನ್ಯಾಜೆ ಬೆಳಾಲು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ನಿರ್ದೇಶಕ ಸುರೇಶ್ ಕೌಡಂಗೆ, ಉಜಿರೆ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಗೌಡ ಧರಣಿ, ಯುವ ವೇದಿಕೆಯ ಕಾರ್ಯದರ್ಶಿ ಶೈಲೇಶ್ ಗೌಡ ಧರಣಿ ಕಿರಿಯಾಡಿ, ಶಿಕ್ಷಕರುಗಳಾದ ಸೋಮಶೇಖರ ಗೌಡ ಬಾಜಿಮಾರು, ಮಹೇಶ್ ಗೌಡ ಬೆಳಾಲು, ಸೀತಾರಾಮ್ ಬೆಳಾಲು ಮತ್ತು ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.