ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ದೀಪ ಸಂಜೀವಿನಿ ಮೇಳ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಅ. 25ರಂದು “ದೀಪ ಸಂಜೀವಿನಿ” ಮೇಳವನ್ನು ಆಯೋಜಿಸಲಾಯಿತು. ‌

ಕಾರ್ಯಕ್ರಮದಲ್ಲಿ ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ತಾ.ಪಂ. ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಸಂಜೀವಿನಿ ಒಕ್ಕೂಟಗಳ ವಲಯ ಮೇಲ್ವಿಚಾರಕಿ ಪ್ರತಿಮಾ, ಸ್ವಸ್ತಿಕ್ ಜೈನ್ ಹಾಗೂ ಲಾಯಿಲ ಒಕ್ಕೂಟದಿಂದ ಪ್ರಜ್ಞಾಶ್ರೀ ಸ್ವಸಹಾಯ ಗುಂಪು, ಬೆಳಾಲು ಒಕ್ಕೂಟದಿಂದ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಗುಂಪು ಹಾಗೂ ಚಾರ್ಮಾಡಿ ಒಕ್ಕೂಟದಿಂದ ಪಲ್ಲವಿ ಸ್ರೀ ಶಕ್ತಿ ಸ್ವಸಹಾಯ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು.

ಈ‌ ಸಂದರ್ಭದಲ್ಲಿ ವಿಶೇಷವಾಗಿ ದನದ ಸೆಗಣಿಯಿಂದ ಹಾಗೂ ಮಣ್ಣಿನಿಂದ ತಯಾರಿಸಿದ ಹಣತೆಗಳನ್ನು ಪ್ರದರ್ಶಿಲಾಗಿದ್ದು, ಬಳಿಕ ಒಟ್ಟು 600 ಹಣತೆಗಳ ಮಾರಾಟವನ್ನು ಮಾಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.