ಕುಂಟಾಲಪಲ್ಕೆ ಶಾಲಾ ಪ್ರಾರಂಭೋತ್ಸವ

ಬಂದಾರು: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆಯಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ತರಗತಿಗಳ ಆರಂಭೋತ್ಸವವು ಅ. 25ರಂದು ಜರಗಿತು.

ಈ ಪ್ರಯುಕ್ತ  ಶಾಲಾ ವಿದ್ಯಾರ್ಥಿಗಳಿಗೆ  ಹೂವು, ಬರೆಯಲು ಪೆನ್ನು, ಪೆನ್ಸಿಲ್ ಹಾಗೂ ನಲಿಕಲಿ ವಿದ್ಯಾರ್ಥಿಗಳಿಗೆ ಕ್ರೇಯಾನ್ಸ್ ನೀಡಿ , ಸಿಹಿತಿಂಡಿ ಹಂಚುವ ಮೂಲಕ  ಸಂಭ್ರಮದಿಂದ ಸ್ವಾಗತಿಸಲಾಯಿತು.

ಮಕ್ಕಳು ಶಾಲೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಶಿಕ್ಷಕರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಸುರೇಶ್ ಮಾಚಾರು, ಪದವೀಧರ ಸಹ ಶಿಕ್ಷಕಿ ಗಾಯತ್ರಿ ಕೆ ಹಾಗೂ ಅತಿಥಿ ಶಿಕ್ಷಕಿ ಹರಿಣಾಕ್ಷಿ ಎನ್,ಅಡುಗೆ ಸಿಬ್ಬಂದಿ ಯಮುನಾ, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.