ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ 1ರಿಂದ 5ನೇ ತರಗತಿಗಳ ಪ್ರಾರಂಭೋತ್ಸವ

ತೆಂಕಕಾರಂದೂರು: ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯಕಟ್ಟೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯ ಪ್ರಾರಂಭೊತ್ಸವ  ಅದ್ದೂರಿಯಾಗಿ ನಡೆಯಿತು.

ಶಾಲಾ ಪ್ರವೇಶ ದ್ವಾರವನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದ್ದು, ಕೋವಿಡ್ ನಿಯಮಾನುಸಾರ ಬ್ಯಾಂಡ್ ವಾದ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಚಟುವಟಿಕೆಯಿಂದ ಇದ್ದ ಮಕ್ಕಳಿಗೆ ಅಭಿನಯ ಗೀತೆಯನ್ನು ಹಾಕಿ ಸಂತಸದ ವಾತಾವರಣ ಮೂಡಿಸಿ ಅವರನ್ನು ಅಭಿನಯಿಸುವಂತೆ ಮಾಡಲಾಯಿತು. ಹೊಸ ಬೆಂಚು ಕುರ್ಚಿಗಳಲ್ಲಿ ಕುಳಿತು ನಲಿಕಲಿ ಮಕ್ಕಳು ಆನಂದಿಸಿದರು.

ಈ ಸಂದರ್ಭದಲ್ಲಿ  ಶಾಲಾ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು, ಬಿಸಿಯೂಟ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.