ಕೈಕಂಬ ಆಶ್ರಮದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ಯವರ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ: ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಬಜಪೆ ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ಸಂದೇಶ್ ಪಿ.ಜಿ ರವರ ಹುಟ್ಟುಹಬ್ಬವನ್ನು ಬೆಳ್ತಂಗಡಿ ರಾಜ ಕೇಸರಿ ಸಂಘಟನೆಯೊಂದಿಗೆ ಕೈಕಂಬ ಜೀವದಾನ ಆಶ್ರಮದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ, ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಕಟೀಲು ಮಲ್ಲಿಗೆಯಂಗಡಿ ಪ್ರಕೃತಿ ಅನಂತೇಶ್ವರ ಕ್ಷೇತ್ರದ ಆಡಳಿತ ಮುಖ್ಯಸ್ಥ ಸುರೇಶ್ ಕಟೀಲು, ಮೂಡಿಬಿದ್ರೆ ತಾಲೂಕು ಅಧ್ಯಕ್ಷ  ಕಿಶೋರ್ ಪೂಜಾರಿ, ಜಿಲ್ಲಾ ಸಾಮಾಜಿಕ ಜಾಲತಾಣದ ಗೌತಮ್ ಪೂಜಾರಿ, ಸದಸ್ಯರುಗಳಾದ ದಿನೇಶ್, ಸಂದೇಶ್, ವಿಶ್ವನಾಥ್ ಪೂಜಾರಿ, ಅಮೃತ್, ವಿವೇಕ್, ಶಿವಪ್ರಸಾದ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಆಶ್ರಮಕ್ಕೆ ಉಪಹಾರದ ವ್ಯವಸ್ಥೆ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.