ಮುಂಡಾಜೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ

ಮುಂಡಾಜೆ : ದ.ಕ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಗ್ರಾ.ಪಂ ಮುಂಡಾಜೆ ,ಎಲ್.ಎನ್ಎಸ್.ಎಂ. ಚಾರಿಟೇಬಲ್ ಟ್ರಸ್ಟ್, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್, ತಾಲೂಕು ವಿಪ್ರ ಪಾಕಶಾಸ್ತ್ರ ಸಂಘ, ಉಜಿರೆ ಮಂದಾರ ಕಲಾವಿದರು, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವುಗಳ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಅ. 24 ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.

ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ ರವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಂಗ್ ಚಾಲೆಂಜರ್ ಸ್ಪೋರ್ಟ್ಸ್ ಕ್ಲಬ್ ನ ಸಂಚಾಲಕ ನಾಮದೇವ ರಾವ್, ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಅನಂತಕೃಷ್ಣ, ತೆಂಗು ರೈತ ಕಂಪೆನಿಯ ಉಪಾಧ್ಯಕ್ಷ ಕುಸುಮ ರಾಜ್, ಸಿಇಒ ಜ್ಞಾನಾ, ಎಲ್.ಎನ್. ಎಸ್. ಎಂ.ನ ಸಂತೋಷ್ ಶೆಟ್ಟಿ, ಕೆ.ಎಂ.ಸಿ ವೈದ್ಯಾಧಿಕಾರಿ ಡಾ| ಸೌಮ್ಯಾ ಗುಪ್ತ ಉಪಸ್ಥಿತರಿದ್ದರು.

ಕಲಾವಿದ ಸುಬ್ಬು ಸೆಂಟ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.