ಕಳಿಯ ಬದಿನಡೆ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾಲೋಚನ ಸಭೆ.

ಗೇರುಕಟ್ಟೆ: ಇಲ್ಲಿಯ ಬದಿನಡೆ ಮತ್ತು ಮಂಜಲಡ್ಕ ಕಲ್ಕುಡ ಮಾಡ ದೈವಗಳ ಸನ್ನಿಧಿಗೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬದಿನಡೆ ದೈವಸ್ಥಾನದಲ್ಲಿ ಆಯಿವೇರ್ ಉಳ್ಳಾಕುಲು,ಉಳ್ಳಾಲ್ತಿ,ಬಂಗಾಡಿ ದೈವ ಮತ್ತು ಮಂಜಲಡ್ಕ ದೈವಸ್ಥಾನದಲ್ಲಿ ಕೊಡಮಣಿತ್ತಾಯ,ಕಲ್ಕುಡ- ಕಲ್ಲುರ್ಟಿ,ಪಿಲಿಚಾಮುಂಡಿ ದೈವಗಳ ಮೂಲಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಡಿ.21 ರಿಂದ 26 ತನಕ ನಡೆಯಲಿದೆ. ಇದರ ಪೂರ್ವ ತಯಾರಿ ಸ್ಥಳೀಯ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಸಮಲೋಚನ ಸಭೆ ಅ.24 ರಂದು ಜರುಗಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ವೇ.ಮೂ.ರಾಘವೇಂದ್ರ ಭಟ್ ಕುಂಠಿನಿ, ಅಧ್ಯಕ್ಷ ಸುಗುಣೇಂದ್ರ ಜೈನ್ ಹಾಗೂ ಕಲಶಾಭಿಷೇಕ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಬಿ, ಕಲಶೋತ್ಸವ ಪೂರ್ವ ತಯಾರಿ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಕುಮಾರ್, ಉಪಾಧ್ಯಕ್ಷರಾದ ತುಕಾಮ ಪೂಜಾರಿ, ಪುಂಡಲೀಕ ಶೆಟ್ಟಿ, ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಕೂಸಪ್ಪ ಗೌಡ, ಜತೆ ಕಾರ್ಯದರ್ಶಿ ಸುರೇಶ್ ಆರ್.ಎನ್, ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಕಳಿಯ ಪಂಚಾಯತು ಸದಸ್ಯರಾದ ವಿಜಯ ಕುಮಾರ್ ಕೆ, ಇಂದಿರಾ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಗೌಡ ಕೆ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕೊಂಕಣ್ ರೈಲ್ವೆ ಅಧಿಕಾರಿ ಸತೀಶ್ ಕುಮಾರ್ ಆರ್.ಎನ್, ಉದ್ಯಮಿ ದಯರಾಜ್ ಕೆ.ಪಿ. ಉಮೇಶ್ ಪೂಜಾರಿ, ಹಿರಿಯ ಕೃಷಿಕ ಪುರಂದರ ಶೆಟ್ಟಿ, ಶಿಲ್ಪಿ ಶಾಮರಾಯ ಆಚಾರ್ಯ, ಜಯಚಂದ್ರ ಅಚಾರಿ, ಅಂಚೆ ಪತ್ರ ಬಟವಾಡೆ ಡಾಕಯ್ಯ ಗೌಡ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಸದಸ್ಯರು, ವಿವಿಧ ಸಮಿತಿ ಸದಸ್ಯರು, ಸ್ಥಳೀಯ ಸಂಘದ ಸಂಸ್ಥೆಗಳ ಪದಾಧಿಕಾರಿಗಳು,ಕಳಿಯ ನ್ಯಾಯತರ್ಫು ಹಾಗೂ ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಲಶಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.