ಲಾಯಿಲ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಲಾಯಿಲ:  ಇಲ್ಲಿಯ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅ.23 ರಂದು ಶಾಲಾ ಸಭಾಂಗಣದಲ್ಲಿ ಜರುಗಿತು.

ಶಾಸಕ ಹರೀಶ್ ಪೂಂಜ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಸ್ ವಿರೂಪಾಕ್ಷಪ್ಪ ಗೌರವ ಉಪಸ್ಥಿತರಿದ್ದರು.  ಬೆಳ್ತಂಗಡಿ ಧರ್ಮಪ್ರಾಂತ್ಯದ  ಧರ್ಮಗುರು ವಂ.ಫಾ| ಡಾ. ಲಾರೆನ್ಸ್ ಮುಕ್ಕುಯಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಯುಕ್ತ ಪ್ರಭು(ಪ್ರಥಮ ರಾಂಕ್), ಜೀವನ್  ಆಶಿತ್ ಪಿರೇರಾ(ದ್ವಿತೀಯ ರಾಂಕ್) ಗಿಲ್ಡಾ ಮ್ಯಾಥ್ಯೂ(ದ್ವಿತೀಯ ರಾಂಕ್) ಜನಶ್ರೀ(ಚತುರ್ಥ ರಾಂಕ್) ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಪೀರಿಯರ್ ಸಿಸ್ಟರ್ ಡೆಲ್ಸಿ ಫಿಲಿಪ್,  ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವಸ್ಯ ವರ್ಗೀಸ್, ಶಾಲಾ ಸಂಚಾಲಕಿ ಸಿಸ್ಟರ್ ಅನಿತಾ , ಸಹಶಿಕ್ಷಕಿ ವಿನಯಶ್ರೀ, ಅಧ್ಯಾಪಕ ವೃಂದದವರು, ಶಾಲಾ ವಿದ್ಯಾರ್ಥಿಗಳು ಪೋಷಕರು, ಶಿಕ್ಷಕ ರಕ್ಷಕ  ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.