ಡೆಂಜೋಳಿಯಲ್ಲಿ ನಿರ್ಮಿಸಿರುವ ವೆಂಟೆಡ್ ಡ್ಯಾಂ ಕಾಮಗಾರಿ ಕಳಪೆಯಾಗಿದೆ: ಕೆ. ವಸಂತ ಬಂಗೇರ ಆರೋಪ

ಗರ್ಡಾಡಿ: ಪಡಂಗಡಿ ಮತ್ತು ಬಳೆಂಜ ಗ್ರಾ.ಪಂ ವ್ಯಾಪ್ತಿಯ ಗರ್ಡಾಡಿ ಮತ್ತು ನಾಲ್ಕೂರು ಗ್ರಾಮಗಳ ರೈತರಿಗೆ ಉಪಯೋಗವಾಗುವಂತೆ ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವೆಂಟೆಡ್ ಡ್ಯಾಮ್ ಕಾಮಗಾರಿ ಕಳಪೆಯಾಗಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಗಂಭೀರವಾಗಿ ಆರೋಪಿಸಿದ್ದಾರೆ.

ಅ.22 ರಂದು ಡೆಂಜೋಳಿಯಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ಪರಿಶೀಲಿಸಿದ ಅವರು, ಈ ಕಾಮಗಾರಿಯನ್ನು ತುರ್ತಾಗಿ ನಿರ್ಮಾಣ ಮಾಡಿದ್ದು, ಒಟ್ಟು ವೆಚ್ಚದಲ್ಲಿ ಅರ್ಧದಷ್ಟೂ ಖರ್ಚಾಗದೇ  ಕಳಪೆ ಗುಣಮಟ್ಟವನ್ನು ಹೊಂದಿದೆ. ಅಲ್ಲದೆ ಈ ಡ್ಯಾಂನ ಸಲಕರಣೆ ಇಡಲು ನಿರ್ಮಿಸಿರುವ ಶೇಡ್ ಕಾಮಗಾರಿಯೂ ಕೂಡಾ ಕಳಪೆಯಾಗಿದ್ದು, ಇಲ್ಲಿ ತಂದು ಹಾಕಿರುವ ಸಿಮೆಂಟ್ ಗಳು ಪೋಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಸಂಪೂರ್ಣ ಪ್ರಯೋಜನವಾಗುವಂತೆ  ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಳಂಜ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ರವರು ಕಳಪೆ ಕಾಮಗಾರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಈ ವಿಚಾರ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆ ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಸಂತೋಷ್ ಕುಮಾರ್ ರವರು ತಮ್ಮ ಬೆಂಬಲಿಗರೊಂದಿಗೆ  ಇವರ ಮನೆಗೆ ಹೋಗಿ ಇವರನ್ನು ಅವ್ಯಾಚ್ಯ  ಮಾತುಗಳಿಂದ ನಿಂದಿಸಿದ್ದು, ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್  ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್  ಕುಮಾರ್ ಕುರ್ತೋಡಿ,  ಸಂತೋಷ್ ನಿನ್ನಿಕಲ್ಲು, ಸಂದೀಪ್ ನೀರಲ್ಕೆ, ಪಡಂಗಡಿ ಗ್ರಾ.ಪಂ. ಮಾಜಿ ಸದಸ್ಯ ಜೇರಾಮ್ ಲೋಬೋ, ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಬಿ ಅಮೀನ್, ಮೇಲ್ಪಿನ್ ಸಿಕ್ವೇರಾ, ದೂಮ ಶೆಟ್ಟಿ, ಧರಣೇಂದ್ರ ಬಳೆಂಜ ರಮೇಶ್ ಆರ್. ಆರ್ ಪುರುಷೋತ್ತಮ ಆಚಾರ್ಯ, ಜಯ ಪೂಜಾರಿ ಖಂಡಿಗ, ವಾಸು ಬಳಂಜ , ಪುರಂದರ ಪೇರಾಜೆ, ಹರೀಶ್ ಮರೆಕ್ಕಿನ, ವಸಂತ ಪೂಜಾರಿ , ರಕ್ಷಿತ್ ಪೇರಾಜೆ, ಹರೀಶ್ ಪೂಜಾರಿ ಮಜ್ಜೇನಿ, ಪ್ರಸಾದ್ ನಿನ್ನಿಕಲ್ಲು, ಸೀನಪ್ಪ ಡೆಂಜೋಲಿ, ಪ್ರಭಾಕರ , ವಿಠಲ, ಚಂದ್ರ ಪೂಜಾರಿ ಮೊದಲಾದವರು  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.