ಬೆಳ್ತಂಗಡಿ ತಾಲೂಕಿನ ರಬ್ಬರ್ ಸೊಸೈಟಿಗೆ ಏಷ್ಯಾದಲ್ಲೇ ಅಗ್ರಗಣ್ಯ ಸ್ಥಾನ: ಶ್ರೀಧರ ಜಿ ಭಿಡೆ

ಉಜಿರೆ : ಮುಂಡಾಜೆಯ ಜಿ.ಎನ್ ಭಿಡೆಯವರ ನೇತೃತ್ವದಲ್ಲಿ 36 ವರ್ಷಗಳ ಹಿಂದೆ ಸ್ಥಾಪಿತವಾದ ಉಜಿರೆಯ ರಬ್ಬರ್ ಸೊಸೈಟಿ ರಾಜ್ಯದಾದ್ಯಂತ ಖರೀದಿಕೇಂದ್ರಗಳನ್ನು ಹೊಂದಿ ವ್ಯವಹಾರದಲ್ಲಿ ಏಷ್ಯಾದಲ್ಲೇ ನಂಬರ್  ವನ್ ಸ್ಥಾನವನ್ನು ಪಡೆದು ಮುನ್ನಡೆಯುತ್ತಿದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ್ ಜಿ ಭಿಡೆ ಹೇಳಿದರು.

ಅವರು ಅ.೨೨ ರಂದು ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಸಂಘದ 36 ನೇ ವಾರ್ಷಿಕ ಮಹಾಸಭೆ ಯ ಬಳಿಕ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

 ಈ ವರ್ಷ ಸಂಘವು ರೂ. 1.01 ಕೋಟಿ  ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ 20 ಡಿವಿಡೆಂಡ್ ಘೋಷಿಸಲಾಗಿದೆ. ರಬ್ಬರ್ ಬೆಳೆಗಾರರಿಗೆ ಸಹಕಾರಿಯಾಗುವ ದೃಷ್ಠಿಯಲ್ಲಿ 35 ಖರೀದಿ ಶಾಖೆಗಳನ್ನು ತೆರೆದಿದ್ದು ಎಲ್ಲಾ ಶಾಖೆಗಳಲ್ಲಿ ಖರೀದಿ ನಡೆಸಲಾಗುತ್ತಿದೆ. ಗುರುವಾಯನಕೆರೆ ಖರೀದಿ ಕೇಂದ್ರದ ನಿವೇಶನ ವತಿಯಿಂದ ಖರೀದಿಸಲಾಗಿದ್ದು, ಮುಂಬರುವ ಡಿಸೆಂಬರ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಕಾಳುಮೆಣಸು ಸೇರಿದಂತೆ ಇತ್ಯಾದಿ ರೈತರ ಉತ್ಪನ್ನಗಳ ಖರೀದಿ ಮಾಡಲಾಗುವುದು ಅಲ್ಲದೆ ಇಲ್ಲಿ ಕಾಳುಮೆಣಸು ಸಂಸ್ಕರಿಸುವ ಕೇಂದ್ರ ಪ್ರಾರಂಭಿಸಲಾಗುವುದು.

ನೈಜ ರಬ್ಬರ್ ಅನ್ನು ಪ್ರತಿಷ್ಟಿತ ಟಯರ್ ಕಂಪೆನಿಗಳಾದ ಎಂ.ಆರ್.ಎಫ್., ಅಪೋಲೋ ಅಲ್ಲದೆ ದೇಶದ ಸುಮಾರು ನೂರೈವತ್ತಕ್ಕೂ ಮಿಕ್ಕಿ ಉತ್ಪಾದನಾ ಕಂಪೆನಿಗಳೊಂದಿಗೆ ವ್ಯವಹಾರ ನಡೆಸುತ್ತಿದ್ದು, ಕೃಷಿಕರ ಉತ್ಪನ್ನಗಳನ್ನು ಉತ್ಪಾದಕರಿಗೆ ನೇರ ಮಾರಾಟ ಮಾಡುವ ಮೂಲಕ ಗರಿಷ್ಠ ಧಾರಣೆ ಸಿಗುವಂತೆ ಪ್ರಯತ್ನಿಸಲಾಗುತ್ತಿದೆ.

2020-21 ನೇ ಸಾಲಿನಲ್ಲಿ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ 1.ಕೆ.ಜಿಗೆ 1.ರೂಪಾಯಿಯಂತೆ ಗರಿಷ್ಠ ರೂ.5000 ಮಿತಿಗೊಳಪಟ್ಟು ಖರೀದಿ ಬೋನಸ್ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ಉಪಾಧ್ಯಕ್ಷ ಅನಂತ ಭಟ್ ಎಂ, ನಿರ್ದೇಶಕರುಗಳಾದ ಜಯಶ್ರೀ ಡಿ.ಎಂ, ಸೀತಾರತ್ನ, ಭೈರಪ್ಪ, ಕೆ.ರಾಮ ನಾಯ್ಕ, ಸೋಮನಾಥ ಬಂಗೇರ ವರ್ಪಾಳೆ, ಗ್ರೇಸಿಯನ್ ವೇಗಸ್, ಎನ್. ಪದ್ಮನಾಭ ಮಾಣಿಂಜ, ಹೆಚ್. ಪದ್ಮ ಗೌಡ , ಕೆ. ಜೆ. ಅಗಸ್ಟಿನ್, ವಿ.ವಿ. ಅಬ್ರಾಹಂ, ಬಾಲಕೃಷ್ಣ ಗೌಡ ಕೆ, ರಬ್ಬರ್ ಪ್ರೊಡಕ್ಷನ್ ಕಮಿಷನರ್ ಪದನಿಮಿತ್ತ ನಿರ್ದೇಶಕ ಎಸ್ ಬಾಲಕೃಷ್ಣ, ವಿಶೇಷ ಆಹ್ವಾನಿತರಾದ ಅಬ್ರಾಹಂ ಬಿ.ಎಸ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.