ವಿಮುಕ್ತಿ ಕೇಂದ್ರದಿಂದ ಕುವೆಟ್ಟು ಶಾಲೆಗೆ ಪುಸ್ತಕಗಳು ಹಾಗೂ ಕಲಿಕೋಪಕರಣಗಳ ಕೊಡುಗೆ

ಕುವೆಟ್ಟು: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಮತ್ತು ಚೈಲ್ಡ್ ಫಂಡ್ ಇಂಡಿಯಾ ಸಹಯೋಗದಲ್ಲಿ  ಕುವೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ರೂ.20, 000 ಮೌಲ್ಯದ ವಿಜ್ಞಾನ ಕಲಿಕೋಪರಣಗಳು, ಗ್ರಂಥಾಲಯ ಪುಸ್ತಕಗಳು ಮತ್ತು ಕಪಾಟನ್ನು  ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಿನೋದ್ ಮಸ್ಕರೇನ್ಹಸ್ ಅ.21 ರಂದು  ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿಮುಕ್ತಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಎಮಿಲ್ಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿರಾಜ್ ಚಿಲಿಂಬಿ, ಸಮಿತಿಯ ಪದಾಧಿಕಾರಿಗಳು,ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ಫಿಲೋಮಿನ ಲೋಬೋ ಸ್ವಾಗತಿಸಿ, ಸಹಶಿಕ್ಷಕರಾದ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಧವಳ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.