ನಾವೂರು ಗ್ರಾ.ಪಂ ವ್ಯಾಪ್ತಿಯಲ್ಲಿ ರೇಬಿಸ್ ನಿರೋಧಕ ಲಸಿಕಾ ಶಿಬಿರ

ನಾವೂರು:  75ನೇ  ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಾವೂರು ಗ್ರಾಮ ಪಂಚಾಯತ್ ,ಬೆಳ್ತಂಗಡಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ನಾವೂರು ಹಾಲು ಉತ್ಪಾದಕರ ಸಹಕಾರ ಸಂಘ, ಬಂಗಾಡಿ ಸಿ.ಎ ಬ್ಯಾಂಕ್  ಸಹಭಾಗಿತ್ವದಲ್ಲಿ ನಾಯಿಗಳಿಗೆ  ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ ಅ.21 ರಂದು ಹಾಲಿನ ಡೈರಿಯ ಅಮೃತ ಸಭಾಭವನದಲ್ಲಿ ಜರುಗಿತು.

ನಾವೂರು ಗ್ರಾ.ಪಂ ಅಧ್ಯಕ್ಷ  ಎನ್.  ಗಣೇಶ್ ಗೌಡ  ರವರು  ಲಸಿಕಾ ಶಿಬಿರವನ್ನು ಉದ್ಘಾಟಿಸಿದರು. ಬೆಳ್ತಂಗಡಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ  ಡಾ| ಮಂಜ ನಾಯ್ಕ , ಹಿರಿಯ ಪಶುವೈದ್ಯಕೀಯ ಪರೀಕ್ಷಕರಾ ರಾಜವರ್ಮ ಜೈನ್ , ಪ್ರಶಾಂತ್ ಕುಮಾರ್ , ಸಚಿನ್,  ಗಂಗಾಧರಸ್ವಾಮಿ, ಬಂಗಾಡಿ ಸಿ.ಎ ಬ್ಯಾಂಕ್  ಮತ್ತು ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ  ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು, ಸಂಘದ ಸದಸ್ಯರು,  ನಾವೂರು ಗ್ರಾ.ಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ , ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ  ನಾವೂರು ಗ್ರಾಮ ಪಂಚಾಯತ್  ವ್ಯಾಪ್ತಿಯ ಸುಮಾರು  280 ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆಯನ್ನು ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.