ಗ್ರಾಮೀಣ ಐಟಿ ಕ್ವಿಜ್: ಧರ್ಮಸ್ಥಳದ ಕೆ ತೇಜಸ್ವಿ ನಾರಾಯಣ್ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ

ಧರ್ಮಸ್ಥಳ: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ದೇಶದ 6 ರಾಜ್ಯಗಳ 8ನೇ ತರಗತಿಯಿಂದ 12ನೇ ತರಗತಿಯ ಗ್ರಾಮೀಣ ಶಾಲಾ ಮಕ್ಕಳಿಗೆ ಆಯೋಜಿಸಲಾದ ಗ್ರಾಮೀಣ ಐಟಿ ಕ್ವಿಜ್ ನಲ್ಲಿ ಧರ್ಮಸ್ಥಳದ ಶ್ರೀ ಧ.ಮಂ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಕೆ. ತೇಜಸ್ವಿ ನಾರಾಯಣ್ ರವರು ಭಾಗವಹಿಸಿ, ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಗೆದ್ದು, ಪ್ರಾದೇಶಿಕ ಹಂತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು, ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ

ತಂತ್ರಜ್ಞಾನ ವಾತಾವರಣ, ವ್ಯವಹಾರ, ತಂತ್ರಜ್ಞಾನ ಕ್ಷೇತ್ರದ ತಜ್ಞರು, ಈ ಕ್ಷೇತ್ರದಲ್ಲಿನ ಟ್ರೆಂಡ್ ಗಳು, ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಒಟ್ಟಾರೆ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ಧಿ ಮೇಲೆ ಬೆಳಕು ಚೆಲ್ಲುತ್ತದೆ ಈ ಗ್ರಾಮೀಣ ಐಟಿ ಕ್ವಿಜ್. ಇಂಟರ್ನೆಟ್ ಜಗತ್ತು, ವಿನೂತನವಾದ ವೆಬ್‍ಸೈಟ್ ಗಳು, ಐಟಿ ಬಜ್ ವರ್ಡ್ಸ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಕ್ತಿಗಳು, ದೂರ ಸಂಪರ್ಕ ಕಂಪನಿಗಳು, ಸಾಫ್ಟ್ ವೇರ್ ಉತ್ಪನ್ನಗಳು ಮತ್ತು ಮಾಹಿತಿ ತಂತ್ರಜ್ಞಾನದ ಇತಿಹಾಸದ ಕುರಿತು ಕ್ವಿಜ್ ನಲ್ಲಿ ಪ್ರಶ್ನಾವಳಿಗಳಿರುತ್ತವೆ. ಶಿಕ್ಷಣ, ಮನೋರಂಜನೆ, ಪುಸ್ತಕ, ಮಲ್ಟಿಮೀಡಿಯಾ, ಸಂಗೀತ, ಸಿನೆಮಾ, ಇಂಟರ್ನೆಟ್, ಬ್ಯಾಂಕಿಂಗ್, ಜಾಹೀರಾತು, ಕ್ರೀಡೆ, ಗೇಮಿಂಗ್, ಸಾಮಾಜಿಕ ಜಾಲ ಮತ್ತು ಮೊಬೈಲ್ ಕ್ಷೇತ್ರದಲ್ಲಿ ಐಟಿಯ ಬಳಕೆ ಕುರಿತಾದ ವಿಚಾರಗಳೂ ಕ್ವಿಜ್ ನಲ್ಲಿ ಅಡಕವಾಗಿರುತ್ತವೆ.

ಇಂತಹ ರಸಪ್ರಶ್ನೆಯಲ್ಲಿ ಧರ್ಮಸ್ಥಳದ ಕೆ ತೇಜಸ್ವಿ ನಾರಾಯಣ್ ರವರು ಭಾಗವಹಿಸಿ ಪ್ರಾದೇಶಿಕ ಹಂತದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾಗಿದ್ದು, ಇಂದು(ಅ.22) ನಡೆದ ರಾಜ್ಯ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ನಲ್ಲಿ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ.

ಕೆ ತೇಜಸ್ವಿ ನಾರಾಯಣ್ ರವರು ಅರಸಿನಮಕ್ಕಿ  ನಿವಾಸಿ ಉದಯಶಂಕರ್ ಮತ್ತು ಅಂಜಲಿ ದಂಪತಿ ಪುತ್ರ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.