ತೆಕ್ಕಾರು: ರೈತರಿಗೆ ಹೈನುಗಾರಿಕೆ ತರಬೇತಿ ಕಾರ್ಯಾಗಾರ

ತೆಕ್ಕಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್  ಗುರುವಾಯನಕೆರೆ, ತೆಕ್ಕಾರು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ, ಮಹಿಳಾ ಹಾಲು ಉತ್ಪಾದಕ ಒಕ್ಕೂಟ ಹೊಸಮೊಗ್ರುತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾ.ಪಂ.ತೆಕ್ಕಾರು ಇವುಗಳ ಸಹಕಾರದೊಂದಿಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ತರಬೇತಿ ಕಾರ್ಯಾಗಾರ ಪ್ರಗತಿಪರ ಕೃಷಿಕ ಸಂದೇಶ್ ಕುಮಾರ್ ಜೈನ್ ರವರ ಮನೆಯಲ್ಲಿ ಜರುಗಿತು.

ಹೊಸಮೊಗ್ರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಪ್ರೇಮ ಸಿ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ತೆಕ್ಕಾರು ಗ್ರಾ. ಪಂ. ಅಧ್ಯಕ್ಷರು ಹಾಗೂ ಜನಜಾಗೃತಿ ವೇದಿಕೆಯ ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷ ಅಬ್ದುಲ್ ರಝಕ್ ಕಾರ್ಯಾಗಾರವನ್ನು ಉದ್ಘಾಟಿಸಿದರು.  ಪಶು ವೈದ್ಯಾಧಿಕಾರಿ ಡಾ| ಸಚಿನ್ ರವರು ಹೈನುಗಾರಿಕೆಯ ಬಗ್ಗೆ ಮಾಹಿತಿ  ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಕೃಷಿ ಮೇಲ್ವಿಚಾರಕ ಭಾಸ್ಕರ್, ತೆಕ್ಕಾರು ಸಿ.ಎ ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರ ಅಡಪ, ಬಾರ್ಯ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ, ತೆಕ್ಕಾರು ಒಕ್ಕೂಟದ ಅಧ್ಯಕ್ಷ ರಮೇಶ್ ಆನಲ್ಕೆ, ಪ್ರಗತಿಪರ ಕೃಷಿಕರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮೇಲ್ವಿಚಾರಕಿ ವಿದ್ಯಾ ಸ್ವಾಗತಿಸಿ, ತೆಕ್ಕಾರು ಪುತ್ತಿಲ ಬಿ ಸೇವಾಪ್ರತಿನಿಧಿ ಶಿವರಾಮ್ ಕಾರ್ಯಕ್ರಮ ನಿರೂಪಿಸಿ. ಬಾರ್ಯ ವಿಭಾಗದ ಸೇವಾಪ್ರತಿನಿಧಿ ವಿಶಾಲಾಕ್ಷಿ  ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.