ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಹೊಸ ವೆಂಟಿಲೇಟರ್ ಅಂಬುಲೆನ್ಸ್ ಹಸ್ತಾಂತರ

ಬೆಳ್ತಂಗಡಿ: ಸರಕಾರದ ವತಿಯಿಂದ ಆರೋಗ್ಯ ಇಲಾಖೆಯ ಮೂಲಕ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಆಧುನಿಕ ಸೌಲಭ್ಯವಿರುವ ಹೊಸ ವೆಂಟಿಲೇಟರ್  ಅಂಬುಲೆನ್ಸ್‌ನ್ನು ಶಾಸಕ ಹರೀಶ್ ಪೂಂಜ ರವರು ಹಸ್ತಾಂತರಿಸಿದರು.

ಶಾಸಕ ಹರೀಶ್ ಪೂಂಜ ರವರು ತಾವೇ ಅಂಬುಲೆನ್ಸ್ ವಾಹನವನ್ನು ಚಲಾಯಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಸರಕಾರಿ ಆಸ್ಪತ್ರೆಗೆ ಸರಕಾರದ ವತಿಯಿಂದ ಆಧುನಿಕ ಸೌಲಭ್ಯದ ಅಂಬುಲೆನ್ಸ್ ನೀಡಲಾಗಿದೆ. ಇದರಲ್ಲಿ ವೆಂಟಿಲೇಟರ್, ಕಾರ್ಡಿಯಲ್ ಮೊನಿಟರ್, ಸಿರೇಂಜ್ ಪಂಪ್, ಮೊನಿಟರ್ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ. ಜಿಲ್ಲೆಯ ಪ್ರತಿ ತಾಲೂಕಿಗೆ ತಲಾ ಒಂದೊಂದು ಅಂಬುಲೆನ್ಸ್ ನೀಡಲಾಗಿದ್ದು, ಅನಾರೋಗ್ಯದ ಸಂದರ್ಭ ಇದರ ಉಪಯೋಗ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಲು ಇಲ್ಲಿನ ಆಸ್ಪತ್ರೆಗೆ ನೀಡಲಾಗಿದೆ ಎಂದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ|ವಿದ್ಯಾವತಿ, ಡಾ| ಆಶಾಲತಾ, ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೇಗ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ, 108 ನೌಕರರ ಸಂಘದ ಜಿಲ್ಲಾಧ್ಯಕ್ಷ ಲೂಯಿಸ್ ಡಿ’ಸೋಜ, ಜಿಲ್ಲಾ ವ್ಯವಸ್ಥಾಪಕ ಮುನೀಶ್, 108 ಸ್ಟಾಪ್ ನರ್ಸ್‌ಗಳಾದ ಕಸ್ತೂರಿ, ಕೇಶವ, ಚಾಲಕರಾದ ಸ್ವಾಮಿ, ಸದೆಯಪ್ಪ ಮೊದಲಾದವರು  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.