ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿದ ಕಳ್ಳ

ಓಡಿಲ್ನಾಳ: ಹಾಡು ಹಗಲೇ ಮನೆಯೊಳಗೆ ನುಗ್ಗಿದ ಕಳ್ಳ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಕರಿಮಣಿಯನ್ನು ಎಳೆದು ಪರಾರಿಯಾದ ಘಟನೆ ಓಡಿಲ್ನಾಳ ಗ್ರಾಮದಲ್ಲಿ ಘಟನೆ  ಅ.19 ರಂದು ಸಂಜೆ ನಡೆದಿದೆ. ಒರಿಸ್ಸಾ ಮೂಲದ ವ್ಯಕ್ತಿ ಅಮೋಶ್ (21.ವ)ಎಂಬವನೇ ಮನೆಗೆ ನುಗ್ಗಿ ಕಳ್ಳತನವೆಸಗಿದ್ದು, ಆತನನ್ನು ಸ್ಥಳೀಯರೇ  ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಓಡಿಲ್ನಾಳ ಗ್ರಾಮದ ಶಾಲೆ ಬಳಿ ವಾಸವಿರುವ ಉಮಾನಾಥ ಮೂಲ್ಯ ರವರ ಮನೆ ಬಳಿ ಬೈಕಿನಲ್ಲಿ ಬಂದ ಕಳ್ಳ ಮನೆಯೊಳಗಿದ್ದ ಅವರ ಪತ್ನಿ ಕಮಲ ರವರ ಕುತ್ತಿಗೆಯಲ್ಲಿದ್ದ ಕರಿಮಣಿಯನ್ನು ಎಗರಿಸಿ ಪರಾರಿಯಾಗಿದ್ದಾನೆ. ಮಹಿಳೆಯ ಬೊಬ್ಬೆಯನ್ನು ಕೇಳಿ ಸೇರಿದ್ದ ಸ್ಥಳೀಯರು ಕಳ್ಳನ ಚಹರೆ ಬಗ್ಗೆ ಮಹಿಳೆಯಲ್ಲಿ ವಿಚಾರಿಸಿದ್ದು, ಮದ್ದಡ್ಕದಲ್ಲಿರುವ ಸೆಲೂನಿನಲ್ಲಿ ಆ ಕಳ್ಳನಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಕೂಡಲೇ ಊರವರು ಆತನನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮೂಲತಃ ಒರಿಸ್ಸಾ ನಿವಾಸಿಯಾಗಿರುವ ಕಳ್ಳ ಅಮೋಶ್(21.ವ) ಓಡಿಲ್ನಾಳ ಗ್ರಾಮದಲ್ಲಿರುವ ಸಂಭಂಧಿಯೋರ್ವರ ಮನೆಗೆ ಬಂದಿದ್ದನು. ಕಳವು ಮಾಡುವ ಸಂದರ್ಭದಲ್ಲಿ ಆತನ ಮೊಬೈಲ್ ಹೆಡ್ ಫೋನ್ ಕೆಳಕ್ಕೆ ಬಿದ್ದಿದ್ದು, ಇದರ ಆಧಾರದಲ್ಲಿ ವಿಚಾರಣೆ ನಡೆಸಿದ ವೇಳೆ ತಾನೇ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕದ್ದೊಯ್ದಿರುವ ಕರಿಮಣಿ ಸರವನ್ನು ಮನೆಯವರಿಗೆ ಮರಳಿಸಿದ್ದಾನೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.