ಮಡಂತ್ಯಾರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಗ್ರಾಮ ಸಮಿತಿ ರಚನೆ

ಮಡಂತ್ಯಾರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕುಕ್ಕಳ-ಪಾರೆಂಕಿ-ಮಾಲಾಡಿ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅ.19 ರಂದು  ಮಡಂತ್ಯಾರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ  ಜರುಗಿತು.

ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿಗೆ ನೂತನ ಅಧ್ಯಕ್ಷರಾಗಿ  ಕಾಂತಪ್ಪ ಗೌಡ ಹಟ್ಟತ್ತೋಡಿ, ಉಪಾಧ್ಯಕ್ಷರಾಗಿ  ಆನಂದ ಗೌಡ ಅನಿಲಡೆ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಬಸವನಗುಡಿ, ಗೌರವಾಧ್ಯಕ್ಷರಾಗಿ ಪರಮೇಶ್ವರ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶೀಲಾ ಜಗದೀಶ್, ಉಪಾಧ್ಯಕ್ಷರಾಗಿ ಸೀತಾ ರಕ್ತೇಶ್ವರಿಪದವು, ಕಾರ್ಯದರ್ಶಿಯಾಗಿ   ನಿಕ್ಷಿತಾ ಪ್ರವೀಣ್,ಯುವ ವೇದಿಕೆಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಹೊಸಮನೆ, ಉಪಾಧ್ಯಕ್ಷರಾಗಿ ಸ್ವಸ್ತಿಕ್ ಗೌಡ ಹಟ್ಟತ್ತೋಡಿ, ಕಾರ್ಯದರ್ಶಿಯಾಗಿ ಶರತ್ ಬಿ.ಕೆ ಹಟ್ಟತ್ತೋಡಿ ಇವರನ್ನು ಆಯ್ಕೆಮಾಡಲಾಯಿತು.

ಇದೇ ವೇಳೆ 2ನೇ ಬಾರಿಗೆ ಮಡಂತ್ಯಾರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ಶೀಲಾ ಜಗದೀಶ್ ರವರನ್ನು ಗ್ರಾಮ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ನಿರ್ದೇಶಕರಾದ ಭವಾನಿ.ಕೆ.ಗೌಡ, ಮಾಧವ ಗೌಡ, ಉಷಾ ವೆಂಕಟ್ರಮಣ, ಸ್ಪಂದನಾ ಸೇವಾ ಸಂಘದ ಅಧ್ಯಕ್ಷ  ಸುರೇಶ್ ಕೌಡಂಗೆ,  ಸದಸ್ಯರಾದ  ಮೀನಾಕ್ಷಿ , ಉಪನ್ಯಾಸಕ  ಮಹಾಬಲ ಗೌಡ ಹಾಗೂ ಸ್ವಜಾತಿ ಬಾಂಧವರು  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.