ಓಡಿಲ್ನಾಳ ಗ್ರಾಮದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ಶಾಸಕರಿಂದ ನಾಮಫಲಕ ಅನಾವರಣ

ಓಡಿಲ್ನಾಳ: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳ ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ ಅ.17 ರಂದು ಜರುಗಿತು.

ಶಾಸಕ ಹರೀಶ್ ಪೂಂಜ ರವರು ಓಡಿಲ್ನಾಳ ಬೂತ್ -147ರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಜೀವನ್ ಕುಲಾಲ್ ರವರ ಮನೆಗೆ ಬಿಜೆಪಿ ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ವಸಂತ ಶೆಟ್ಟಿ ಮಠ, ವಿಠಲ ಆಚಾರ್ಯ, ಬೂತ್ -147ರ ಬಿಜೆಪಿ ಬೂತ್ ಸಮಿತಿ  ಕಾರ್ಯದರ್ಶಿ ನವೀನ್ ಹೆಗ್ಡೆ, ಬಿಜೆಪಿ ಪ್ರಮುಖರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಗ್ರಾ.ಪಂ ಸದಸ್ಯರಾದ ಲಕ್ಷ್ಮೀಕಾಂತ ಶೆಟ್ಟಿ ಮೂಡಾಯಿಲು, ಭಾರತಿ ಎಸ್ ಶೆಟ್ಟಿ ಮುಂಗೇಲು, ವೇದಾವತಿ ಗೌಡ ಕರ್ನಂತೋಡಿ, ಆನಂದಿ ಪಡ್ಡಾಯಿಲು, ಸ್ಥಾಯಿ ಸಮಿತಿಯ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಬೂತ್ ಸಮಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.