ತಣ್ಣೀರುಪಂತ: ಅಪಘಾತಕ್ಕೀಡಾದ ಅಂಗನವಾಡಿ ಕಾರ್ಯಕರ್ತೆಗೆ ವೈದ್ಯಕೀಯ ನೆರವು ಹಸ್ತಾಂತರ

ತಣ್ಣೀರುಪಂತ : ಕರಾಯ ಗ್ರಾಮದ ಶಿವಗಿರಿ ಸಮೀಪದ ಬಡಕುಟುಂಬದ ನಿವಾಸಿ ಜನಾರ್ದನ ಗೌಡರವರ ಪತ್ನಿ, ಉಜ್ರಿಬೆಟ್ಟು ಅಂಗನವಾಡಿ ಕಾರ್ಯಕರ್ತೆ ಅನುರಾಧಾ ರವರು ಇತ್ತೀಚೆಗೆ  ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಚಿಕಿತ್ಸೆಗೆ ನೆರವಾಗುವರೇ ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ವತಿಯಿಂದ ಅ.18 ರಂದು ಅವರ ಮನೆಗೆ ತೆರಳಿ ರೂ.32,150  ಸಹಾಯಧನ ಹಸ್ತಾಂತರಿಸಿ,  ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಅಧ್ಯಕ್ಷೆ ಹಾಗೂ ಕಣಿಯೂರು ವಲಯದ ರಾಜೀವಿ ಕಡವಿನ ಬಾಗಿಲು, ಕಾರ್ಯದರ್ಶಿ ಹಾಗೂ ಇಂದಬೆಟ್ಟು ವಲಯದ ಶಶಿಕಲಾ ಕೊಯನಗರ, ಬೆಳ್ತಂಗಡಿ ವಲಯದ ಗೀತಾ ಕುಮಾರಿ, ಪಡಂಗಡಿ ವಲಯದ ಗುಣವತಿ ಕೆ.ಎನ್, ಧರ್ಮಸ್ಥಳ ವಲಯದ ಭಾರತಿ ಹೊಸ್ತೋಟ, ಕೊಕ್ಕಡ ವಲಯದ ಕುಸುಮ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.