ಮಾಯಾ ಸ್ಟ್ರೈಕರ್ಸ್ ವತಿಯಿಂದ ಕಬ್ಬಡಿ ಮತ್ತು ಹಗ್ಗ ಜಗ್ಗಾಟ ಪಂದ್ಯಾಟ

ಬೆಳಾಲು : ಮಾಯಾ ಸ್ಟ್ರೈಕರ್ಸ್ ವತಿಯಿಂದ ಮಾಯಾ ಮಹಾದೇವ ದೇವಸ್ಥಾನದ ವಠಾರದಲ್ಲಿ ಕಬ್ಬಡಿ ಮತ್ತು ಹಗ್ಗ ಜಗ್ಗಾಟ ಪಂದ್ಯಾವಳಿ ಅ. 10 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಬೆಳಾಲು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಸದಸ್ಯರುಗಳಾದ ದಿನೇಶ್ ಕೋಟ್ಯಾನ್, ಸುರೇಂದ್ರ ಗೌಡ, ಕೃಷ್ಣಯ್ಯ ಆಚಾರ್ಯ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಧರ್ಮೇಂದ್ರ ಕುಮಾರ್,  ಸುರೇಶ್, ಶಶಿಧರ ಓಡಿಪ್ರೊಟ್ಟು, ವಿಜಯ ಅತ್ತಾಜೆ, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಶಿಲ್ಪಿ ಶಶಿಧರ ಆಚಾರ್ಯ, ಶೇಖರ್ ಕೊಲ್ಲಿಮಾರು, ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಸಂಘಟಕ ಮಿತ್ರರು  ಉಪಸ್ಥಿತರಿದ್ದು ಸಹಕರಿಸಿದರು.

ಕಬ್ಬಡಿ ಮತ್ತು ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ವಿಜೇತರಾದ ತಂಡಗಳಿಗೆ 70 ಕೆ ಜಿ ಅಕ್ಕಿ(ಪ್ರಥಮ), 35 ಕೆ.ಜಿ ಅಕ್ಕಿ ಮತ್ತು ಚಾಹುಡಿ, ಸಕ್ಕರೆ(ದ್ವಿತೀಯ) ಬಹುಮಾನ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.