ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ವಾಹನಗಳ ಶುದ್ಧೀಕರಣ ಹಾಗೂ ಮಿಷನ್ ಸಂಡೆ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಆಯುಧ ಪೂಜೆಯ ಪ್ರಯುಕ್ತ ವಾಹನಗಳ ಶುದ್ಧೀಕರಣ ಹಾಗೂ ಮಿಷನ್ ಸಂಡೇ ಕಾರ್ಯಕ್ರಮ ಅ.17ರಂದು ನಡೆಯಿತು.

ಚರ್ಚ್ ಧರ್ಮಗುರು ವಂ.ಫಾ| ಜೇಮ್ಸ್ ಡಿ’ಸೋಜ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ.ಫಾ| ಉದಯ ಜೋಸೆಫ್ ಫೆರ್ನಾಂಡಿಸ್ ಹಾಗೂ ವಂ.ಫಾ|ಬ್ರಾಯಾನ್ ಫೆರಿಸ್ ಭಟ್ ಸಹಕರಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್,  ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್ , ಪಾಲನಾ ಮಂಡಳಿಯ ಸರ್ವ ಸದಸ್ಯರು, ಉಜಿರೆ ಗ್ರಾ.ಪಂ ಸದಸ್ಯ ಪ್ರೇಮ್ ವೇಗಸ್ ಹಾಗೂ ಐಸಿವೈಯು ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಬಳಿಕ ಮಿಷನ್ ಸಂಡೆ ಪ್ರಯುಕ್ತ ಕ್ರೈಸ್ತ ಬಾಂಧವರಿಂದ ಕಾಣಿಕೆಯಾಗಿ ಅರ್ಪಿಸಲಾದ ತರಕಾರಿ,ಅಕ್ಕಿ, ಕೋಳಿ , ತೆಂಗಿನಕಾಯಿ ಇನ್ನಿತರ ಸಾಮಗ್ರಿಗಳನ್ನು  ಏಲಂ ಮಾಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.