ಔಷಧಿ ತರಲೆಂದು ಹೋದ  ಕಳಿಯ ಗ್ರಾಮದ ವ್ಯಕ್ತಿ ಉಪ್ಪಿನಂಗಡಿ ನದಿಗೆ ಹಾರಿ ಆತ್ಮಹತ್ಯೆ

ಕಳಿಯ: ಕಳಿಯ ಗ್ರಾಮದ  ಪರಪ್ಪು ನಿವಾಸಿಯೋರ್ವರು ಉಪ್ಪಿನಂಗಡಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ಇಂದು (ಅ.18) ಬೆಳಿಗ್ಗೆ ನಡೆದಿದೆ.

ಕಳಿಯ ಗ್ರಾಮದ ಪರಪ್ಪು ಸುಣ್ಣಲಡ್ಡ ಮನೆ ನಿವಾಸಿ ಮುತ್ತಪ್ಪ ಶೆಟ್ಟಿ ಎಂಬವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಸುಮಾರು 9.00 ಗಂಟೆಯ ಅವಧಿಯಲ್ಲಿ ಮುತ್ತಪ್ಪ ಶೆಟ್ಟಿ ಯವರು ಔಷಧಿ ತರಲೆಂದು ಗೇರುಕಟ್ಟೆಯಿಂದ  ವರುಣ್ ಬಸ್ಸಿನಲ್ಲಿ  ಉಪ್ಪಿನಂಗಡಿ ಕಡೆಗೆ ಪ್ರಯಾಣಿಸಿದ್ದರು.  ಬಸ್ಸಿನಿಂದ ಇಳಿದ ನಂತರ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯಲ್ಲಿರುವ ನೇತ್ರಾವತಿ ಸೇತುವೆಯ ಮೇಲೆ ಬಂದು ನಿಂತು ಮುಖ, ಕಣ್ಣು ಸಹಿತ ತಲೆಯ ತನಕ ಬಟ್ಟೆ ಸುತ್ತಿಕೊಂಡು ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಉರುವಾಲು ನಿವಾಸಿಗಳಾದ ಹಂಝ ಮತ್ತು ಅಶ್ರಫ್ ಎಂಬವರು ಕಾರಿನಲ್ಲಿ ಸೇತುವೆ ಮೇಲೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ವೃದ್ಧರೋರ್ವರು ಸೇತುವೆಯಿಂದ ನದಿಗೆ ಹಾರುವುದನ್ನು ಗಮನಿಸಿದ್ದು, ತಕ್ಷಣ ಕಾರು ನಿಲ್ಲಿಸಿ, ಸೇತುವೆಯ ಇನ್ನೊಂದು ತುದಿಯಲ್ಲಿ ಇದ್ದ ಯು.ಟಿ. ಫಯಾಝ್ ಮತ್ತು ರಶೀದ್ ಕಡವಿನಬಾಗಿಲು ಇವರಿಗೆ ಮಾಹಿತಿ ನೀಡಿದರು.

ನದಿಗೆ ಹಾರಿದ್ದ ಮುತ್ತಪ್ಪ ಶೆಟ್ಟಿಯವರು ನೀರಿನ ಆಳಕ್ಕೆ ಹೋಗಿ ಮತ್ತೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಇವರುಗಳು ಈಜುತ್ತಲೇ ಹೋಗಿ ವೃದ್ಧನನ್ನು ಹಿಡಿದು ರಕ್ಷಿಸಲು ಪ್ರಯತ್ನಿಸಿದ್ದು, ಅಷ್ಟರಲ್ಲಾಗಲೇ  ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಬಳಿಕ ಇವರುಗಳು ಮೃತದೇಹವನ್ನು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಸಾಗಿಸಿದ್ದು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇದರಿಂದ ಮನನೊಂದು ಈ ಕೃತ್ಯವೆಸಗಿರಬಹುದೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

ಮೃತರು ಪತ್ನಿ ಕಲ್ಯಾಣಿ , ಓರ್ವ ಪುತ್ರ ಸುದರ್ಶನ, ಮೂವರು ಪುತ್ರಿಯರಾದ ಸುಮಲತಾ, ಸುಜಾತಾ, ಸುನೀತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.