ಪೆರಾಡಿ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನದ ಪ್ರಾಂಗಣ ಕಾಮಗಾರಿಗೆ ಭೂಮಿ ಪೂಜೆ

ಪೆರಾಡಿ: ಇಲ್ಲಿಯ  ಶ್ರೀ ದೈವ ಕೊಡಮಣಿತ್ತಾಯ ಮತ್ತು ಶ್ರೀ  ಬ್ರಹ್ಮ ಬೈದರ್ಕಳ ಗರಡಿ ಪಂಡಿಂಜೆ ಬೆಟ್ಟ ದೈವಸ್ಥಾನದ ಪ್ರಾಂಗಣ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಅ.11 ರಂದು ಜರುಗಿತು

ಹೈಕೋರ್ಟ್  ನ್ಯಾಯವಾದಿ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಪ್ರಾಂಗಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೋಟಿ ಚೆನ್ನಯ್ಯ ತುಳುನಾಡಿನಲ್ಲಿ ಸತ್ಯ ಧರ್ಮ ನ್ಯಾಯಕ್ಕಾಗಿ ಹೋರಾಟ ಮಾಡಿದವರು, ನಂಬಿದವರಿಗೆ ರಕ್ಷಣೆ ನೀಡಿ ಸತ್ಯವನ್ನು ಜಯಿಸಿ ಕೊಡುತ್ತೇವೆ’ ಎಂದು ಇವರು ನೀಡುವ ಅಭಯವಾಣಿ ತುಳುನಾಡಿನ ಜನವರ್ಗದ ಮನಃಪಟಲದಲ್ಲಿ ಬಲವಾದ ಭರವಸೆ ಮೂಡಿಸುತ್ತದೆ. ಕೋಟಿ ಚೆನ್ನಯ್ಯ ರನ್ನು ಜಾತಿವರ್ಗ ಭೇದವಿಲ್ಲದೆ ಜನ ಆರಾಧಿಸುತ್ತಾರೆ. ಕಾಯ ಬಿಟ್ಟು ಮಾಯೆ ಸಂದ ಬಳಿಕ ದೈವ ಶಕ್ತಿಗಳಾಗಿ ತುಳುನಾಡಿನ 250ಕ್ಕೂ ಅಧಿಕ ಗರೋಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಶಕ್ತಿಗಳು ಕೋಟಿ ಚೆನ್ನಯ್ಯರು ಈ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪೆರಾಡಿ ಬೀಡು ರಾಜೇಂದ್ರ ಪಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪೆರಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ  ಸತೀಶ್ ಕಾಶಿಪಟ್ನ ,ಮಾಗಣೆ ಆಸ್ರಣ್ಣರಾದ ವೇ।ಮೂ।ಅನಂತ ಆಸ್ರಣ್ಣರು, ಕೊರಾಂಬಡು ಯುವರಾಜ ಪೂವಣಿ, ಹಿಮರೋಡಿ ಗುಣಪಾಲ್ ಜೈನ್, ಪೆರಾಡಿ ದೇವರಾಜ ಶೆಟ್ಟಿ , ದೊಲ್ದೊಟ್ಟು ಬರ್ಕೆ ಗುರಿಕಾರ ಸದಾನಂದ ಪೂಜಾರಿ , ದೈವಸ್ಥಾನಕ್ಕೆ ಸಂಬಂಧಪಟ್ಟ ಗುರಿಕಾರರು ಹಾಗೂ ಪೆರಾಡಿ, ಸಾವ್ಯ ಮತ್ತು ಮರೋಡಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.


ಮೇಕಾರು ಕುಕ್ಕಿನಂತಾಯ ದೈವದ ಗಡಿಕಾರ ಕೆ ಸದಾಶಿವ ಹೆಗ್ಡೆ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.