ಬೆಳಾಲು ಗೌಡರ ಯಾನೆ ಒಕ್ಕಲಿಗರ ಸಂಘದಿಂದ ದಿ| ಮೋಹನ ಗೌಡರಿಗೆ ಶ್ರದ್ಧಾಂಜಲಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಬೆಳಾಲು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಬೆಳಾಲು ಗೌಡರ ಯಾನೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ, ಹಾಗೂ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದ  ದಿ|ಮೋಹನ ಗೌಡ ಏರ್ದೊಟ್ಟು ರವರಿಗೆ ಶ್ರದ್ಧಾಂಜಲಿ ಸಭೆ ಬೆಳಾಲು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಸೇರಿದ ಗಣ್ಯರು ಅಗಲಿದ ನಾಯಕನಿಗೆ ಮೌನ ಪ್ರಾರ್ಥನೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು. ಯುವ ವೇದಿಕೆ ಗೌರವಾಧ್ಯಕ್ಷ ಧರ್ಮೇಂದ್ರ ಗೌಡ, ತಾಲೂಕು ಸಂಘದ ಗೌರವಾಧ್ಯಕ್ಷ ಪದ್ಮ ಗೌಡ ನುಡಿನಮನ ಸಲ್ಲಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಸುರೇಂದ್ರ ಗೌಡ , ತಾಲೂಕು ಸಂಘದ ನಿರ್ದೇಶಕಿ  ಉಷಾ ವೆಂಕಟರಮಣ ಗೌಡ, ಗ್ರಾಮ ಸಮಿತಿ ಕಾರ್ಯದರ್ಶಿ ಕರಿಯಣ್ಣ ಗೌಡ, ಜಯಾನಂದ ಗೌಡ ಏರ್ದೊಟ್ಟು , ಬೆಳಾಲು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಗೌಡ ಎಳ್ಳುಗದ್ದೆ, ಬೆಳಾಲು ಸಹಕಾರಿ ಸಂಘದ ನಿರ್ದೇಶಕ ವಿಜಯ ಗೌಡ ಸೌತೆಗದ್ದೆ,  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ಎಳ್ಳುಗದ್ದೆ, ಮಹಿಳಾ ವೇದಿಕೆ ಕಾರ್ಯದರ್ಶಿ ಲೀಲಾ ಬೆಳಾಲು, ಉಪನ್ಯಾಸಕ ಬೆಳ್ಳಿಯಪ್ಪ ಗೌಡ, ಉಮೇಶ್ ಗೌಡ ಮಂಜ್ಜೊತ್ತು, ಶೇಖರ್ ಗೌಡ ಕೊಳ್ಳಿಮಾರು, ಕೇಶವ ಟೈಲರ್, ಮೋನಪ್ಪ ಗೌಡ ಪನ್ನಾಜೆ ಸ್ಟೋರ್, ಮಂಜುನಾಥ ಗೌಡ ಹಾಗೂ ಗ್ರಾಮದ ಸ್ವಜಾತಿ ಬಾಂಧವರು ಉಪಸ್ಥಿತರಿದ್ದು, ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಗೌಡರ ಯಾನೆ ಒಕ್ಕಲಿಗರ ಸಂಘದ  ಯುವ ವೇದಿಕೆ ಕಾರ್ಯದರ್ಶಿ ಸೀತಾರಾಮ ಗೌಡ ಕಾವಟೆಗುಡ್ಡೆ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಮಹೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಭವಾನಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.