ಕಳಿಯ ಬದಿನಡೆ ದೈವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಸಮಾಲೋಚನ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಬದಿನಡೆ, ಮಂಜಲಡ್ಕ ಕಲ್ಕುಡ ಮಾಡ ದೈವಗಳ ಸನ್ನಿಧಿಗೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬದಿನಡೆ ದೈವಸ್ಥಾನದಲ್ಲಿ ಆಯಿವೇರ್ ಉಳ್ಳಾಕುಲು, ಉಳ್ಳಾಲ್ತಿ, ಬಂಗಾಡಿ ದೈವ ಮತ್ತು ಮಂಜಲಡ್ಕ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಕಲ್ಕುಡ- ಕಲ್ಲುರ್ಟಿ, ಪಿಲಿಚಾಮುಂಡಿ ದೈವಗಳ ಮೂಲಸ್ಥಾನದ ಜೀರ್ಣೋದ್ಧಾರ ಕೆಲಸ ಮತ್ತು ಬ್ರಹ್ಮಕಲಶೋತ್ಸವ ಡಿ.21 ರಿಂದ 26 ತನಕ ನಡೆಯಲಿದೆ.

ಇದರ ಪೂರ್ವ ತಯಾರಿ ಬಗ್ಗೆ ಸ್ಥಳೀಯ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಸಮಲೋಚನ ಸಭೆ ಅ.9 ರಂದು ಜರುಗಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಗುಣೇಂದ್ರ ಕುಮಾರ್, ಅಧ್ಯಕ್ಷ ಸುರೇಂದ್ರ ಕುಮಾರ್, ಉಪಾಧ್ಯಕ್ಷ ಸತ್ಯೇಂದ್ರ ಕುಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೂಸಪ್ಪ ಗೌಡ, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು, ಅಧ್ಯಕ್ಷ ಕೇಶವ ಬಂಗೇರ, ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ,ಕಳಿಯ ಪಂಚಾಯತು ಸದಸ್ಯರಾದ ದಿವಾಕರ ಎಮ್, ವಿಜಯ ಕುಮಾರ್ ಕೆ, ಹರೀಶ್ ಕುಮಾರ್ ಬಿ, ಇಂದಿರಾ, ಶಕುಂತಲಾ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಹೋಟೆಲ್ ಉದ್ಯಮಿ ಸುರೇಶ್ ಅರ್.ಎನ್, ಕೊಂಕಣ್ ರೈಲ್ವೆ ಅಧಿಕಾರಿ ಸತೀಶ್ ಕುಮಾರ್ ಆರ್.ಎನ್, ಬ್ರಹ್ಮ ಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಸುಧೀರ್ ಕುಮಾರ್, ರಾಜೇಶ್ ಪೇರ್ಬುಡ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಕಳಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಕಳಿಯ, ನ್ಯಾಯತರ್ಫು ಹಾಗೂ ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.