ಧರ್ಮಸ್ಥಳದ ಜಾಗದಲ್ಲಿ ವಾಸ್ತವ್ಯವಿದ್ದವರಿಗೆ ದಾನಪತ್ರ ವಿತರಿಸಿದ ಡಿ. ಹರ್ಷೇಂದ್ರ ಕುಮಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನದಲ್ಲಿದ್ದ 1 ಎಕ್ರೆ 6ಸೆಂಟ್ಸ್ ಜಾಗದಲ್ಲಿ ವಾಸ್ತವ್ಯ ಇದ್ದ ಪರಿಶಿಷ್ಟ ಜಾತಿಯ 18 ಮನೆಗಳ ನಿವಾಸಿಗಳಿಗೆ ಅ. 12ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ದಾನಪತ್ರ ವಿತರಿಸಿದರು. ತಹಶೀಲ್ದಾರ್ ಅವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿವಾಸಿಗಳಿಗೆ ದಾನಪತ್ರ ವಿತರಿಸಿ, ಸೀರೆ – ಪಂಚೆ ವಿತರಿಸಿ ಮಾತನಾಡಿದರು.

ಉಪ್ಪಿನಂಗಡಿಯ ಕದಿಕ್ಕಾರು ಬೀಡಿನಲ್ಲಿ ಸುಮಾರು 300 ಎಕರೆಯಷ್ಟು ಜಾಗವಿತ್ತು. ಭೂಸುಧಾರಣಾ ಕಾಯ್ದೆ ಬಂದಾಗ ಎಲ್ಲಾ ಜಾಗವೂ ಹೋಗಿ 23 ಎಕರೆ ಮಾತ್ರ ಉಳಿಯಿತು. ಇನ್ನೂ ಕೆಲವರು ಭೂಸುಧಾರಣಾ ಕಾಯ್ದೆಯಡಿ ಅರ್ಜಿ ನೀಡದೇ, ಅದೇ ಜಾಗದಲ್ಲಿ ವಾಸ್ತವ್ಯ ಹೂಡಿದ್ದರು. ಅಂತಹ 18   ಮನೆಗಳನ್ನು ಗುರುತಿಸಿ, ಆ ಜಮೀನನ್ನು ಅವರ ಹೆಸರಿಗೆ ನೀಡಲಾಗಿದೆ. ಇಂದು ಜಾಗದ ದಾನಪತ್ರ ತೆಗೆದುಕೊಂಡವರು, ಶ್ರೀ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿರಬೇಕು. ಕ್ಷೇತ್ರದ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು ಎಂದರು.

ಭೂಸುಧಾರಣಾ ಕಾಯ್ದೆ ಬರುವ ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿನಲ್ಲಿ ಸುಮಾರು 4600 ಎಕರೆಯಷ್ಟು ಜಾಗವಿತ್ತು. 1972-73ರ ಬಳಿಕ 3600ಎಕರೆ ಉಳಿಯಿತು. ಇನ್ನು ಭೂಸುಧಾರಣೆಯಡಿ ಜಾಗ ಪಡೆದುಕೊಳ್ಳದವರಿಗೆ ಈಗ ಜಾಗ ನೀಡುವ ಕೆಲಸವನ್ನು ಕ್ಷೇತ್ರದ ವತಿಯಿಂದ ಮಾಡುತ್ತಿದ್ದೇವೆ. ಸುಳ್ಯದ ಮರ್ಕಂಜದಲ್ಲೂ 15 ಕುಟುಂಬಗಳಿಗೆ ದಾನಪತ್ರದ ಮೂಲಕ ಜಾಗ ನೀಡಲು ನಿರ್ಧರಿಸಲಾಗಿದೆ ಎಂದರು.

ಫಲಾನುಭವಿ ಮಹಾಲಿಂಗ ಮಾತನಾಡಿ, ನಾವು ದೇವರ ಜಾಗದಲ್ಲಿ ಕುಳಿತಿದ್ದೇವೆ. ಹುಟ್ಟಿದರೂ – ಸತ್ತರೂ ಇಲ್ಲೇ ಎಂದು ಹಿರಿಯರು ಹೇಳುತ್ತಿದ್ದರು. ಅದರಂತೆ ನಾವು ಭೂಸುಧಾರಣೆಯಡಿ ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಇಂದು ಪ್ರಸಾದದ ರೂಪದಲ್ಲಿ ಈ ಜಾಗವನ್ನು ನಮಗೆ ನೀಡುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರು ಮಾರ್ಗದರ್ಶನ ನೀಡಿದ್ದಲ್ಲದೇ, ನಮಗೆ ಯಾವುದೇ ರೀತಿಯಲ್ಲೂ ಹೊರೆ ಆಗದಂತೆ ಎಲ್ಲಾ ಕೆಲಸವನ್ನು ಅವರೇ ಖುದ್ದಾಗಿ ಮುಂದೆ ನಿಂತು ಮಾಡಿದ್ದಾರೆ ಎಂದರು.

ಇದೇ ಸಂದರ್ಭ ಆಯುಷ್ಮಾನ್ ಕಾರ್ಡನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತಹಸೀಲ್ದಾರ್ ರಮೇಶ್ ಬಾಬು, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಎಸ್‌ಕೆಡಿಆರ್‌ಡಿಪಿಯ ಆನಂದ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಕಂದಾಯ ವಿಭಾಗದ ಮುಖ್ಯಸ್ಥ ಶುಭಚಂದ್ರರಾಜ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.