ಅ.18: ಭಾರತೀಯ ಮಜ್ದೂರ್ ಸಂಘದ ಸ್ಥಳಾಂತರಗೊಂಡ ನೂತನ ಕಛೇರಿಯ ಉದ್ಘಾಟನೆ & ಕಾರ್ಮಿಕರ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಸ್ಥಳಾಂತರಗೊಂಡ ನೂತನ ಕಛೇರಿಯ ಬೆಳ್ತಂಗಡಿ ಶಾಸಕರ ಕಾರ್ಯಾಲಯದ ಎದುರುಗಡೆ  ಶುಭಾರಂಭಗೊಳ್ಳಲಿದೆ. ಸುವ್ಯವಸ್ಥಿತವಾಗಿ ರಚನೆಗೊಂಡ  ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಹಾಗೂ ಕಾರ್ಮಿಕರ ಸಮಾವೇಶ ಅ.18 ರಂದು ನಡೆಯಲಿದೆ ಎಂದು ಬಿಎಂಎಸ್  ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ  ಉದಯ ಬಿ.ಕೆ ಹೇಳಿದರು.

ಅವರು ಅ.12 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಾರ್ಮಿಕರ ಹಿತರಕ್ಷಣೆ ಹಾಗೂ ಕಾರ್ಮಿಕರನ್ನು ಸದೃಢ ರಾಷ್ಟ್ರ ನಿರ್ಮಾಣದ ಚಿಂತನೆಯೊಂದಿಗೆ ಒಗ್ಗೂಡಿಸುವ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು 1955 ಎಪ್ರಿಲ್ 23ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ದತ್ತೊಪಂಥ ಥೇಂಗಡಿಜೀಯವರು ಭಾರತೀಯ ಮಜೂರ್ ಸಂಘವನ್ನು ಸ್ಥಾಪನೆ ಮಾಡಿದರು. ರಾಷ್ಟ್ರೀಯತೆ, ದೇಶಾಭಿಮಾನ ಕಾರ್ಮಿಕರ ಬದುಕನ್ನು ಸುಧಾರಿಸುವ ವಿಚಾರದಡಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರದೊಂದಿಗೆ ಕಾರ್ಮಿಕರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರಪಂಚದ ಅತೀ ಹೆಚ್ಚು ಕಾರ್ಮಿಕ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ.

5000 ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ವರ್ಗ ಸಂಘಗಳ ಮಾತೃಸಂಸ್ಥೆಯಾಗಿ ಈಗ ಕಾರ್ಯನಿರ್ವಹಣೆ ಮಾಡಿ ಕಾರ್ಮಿಕರ ಏಳಿಗೆಗಾಗಿ ದುಡಿಯುತ್ತಿದ್ಸದು, ಕರ್ನಾಟಕದಲ್ಲಿ 330 ಕಾರ್ಮಿಕ ಯೂನಿಯನ್‌ಗಳು ಐ.ಎಂ.ಎಸ್.ನೊಂದಿಗೆ ಸಂಯೋಜನೆಗೊಂಡಿದೆ. ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಅತ್ಯಂತ ಪ್ರಬಲವಾಗಿ ವಿರೋಧಿಸಿಕೊಂಡು ಬಂದು ನಿರಂತರವಾಗಿ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡುತ್ತಿದ್ದು, ದೇಶದ ಅನೇಕ ಕಡೆಗಳಲ್ಲಿ ಬಿ.ಎಂ.ಎಸ್. ತನ್ನ ಕಛೇರಿಗಳನ್ನು ತೆರೆದು ಕಾರ್ಮಿಕರ ಮಧ್ಯೆ ಕಾರ್ಯನಿರ್ವಹಿಸುತ್ತಿದೆ.

ಇದೇ ರೀತಿ ಬೆಳ್ತಂಗಡಿ ತಾಲೂಕಿನಲ್ಲಿ ಕೂಡ ಕಳೆದ 3 ವರ್ಷಗಳ ಹಿಂದೆ ಬಿ.ಎಂ.ಎಸ್. ತಾಲೂಕು ಸಮಿತಿಯನ್ನು ರಚನೆ ಮಾಡಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವಲ್ಲಿ ಇತರ ಕಡೆಗಳಿಂತಲೂ ಮುಂಚೂಣಿಯಲ್ಲಿದೆ. ಭಾರತೀಯ ಮದ್ದೂರ್‌ ಸಂಘದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಾಮಗಾರಿ ಮದ್ದೂರ್‌ ಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 5000ಕ್ಕಿಂತಲೂ ಕಟ್ಟಡ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆ ಮಾಡಿಸಿ, ಅವರಿಗೆ ವಿವಿಧ ಬಗೆಯ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದು, ಸಂಘದ ಸದಸ್ಯ ಕಟ್ಟಡ ಕಾರ್ಮಿಕರಿಗೆ ಈ ವರ್ಷ ಸ್ಕಾಲರ್‌ಶಿಪ್, ವಿವಾಹ ಸಹಾಯಧನ, ಮರಣ ಪರಿಹಾರ ಹಾಗೂ ಕೋವಿಡ್ ಸಹಾಯಧನ ಹೀಗೆ ಸುಮಾರು ರೂ.1 ಕೋಟಿ 50ಲಕ್ಷಕ್ಕಿಂತಲೂ ಮೀರಿ ಸಹಾಯಧನವನ್ನು ಸರಕಾರದಿಂದ ತೆಗೆಸಿಕೊಟ್ಟಿದೆ.

ರಬ್ಬರ್ ಟ್ಯಾಪರ್ಸ್ ಕಾರ್ಮಿಕರನ್ನು ಸಂಘಟಿಸಲು ರಬ್ಬರ್ ಟ್ಯಾಪರ್ಸ್ ಮನ್ಸೂರ್ ಸಂಘವನ್ನು ರಾಜ್ಯದಲ್ಲೇ ಪ್ರಥಮಬಾರಿಗೆ ಬೆಳ್ತಂಗಡಿಯಲ್ಲಿ ಪ್ರಾರಂಭಿಸಿದ್ದೇವೆ ಮತ್ತು ವಿವಿಧ ತಾಲೂಕುಗಳಲ್ಲೂ ಸಮಿತಿಯನ್ನು ರಚಿಸಿ, ಕಾರ್ಮಿಕರನ್ನು ಸಂಘಟಿಸುವ ದೃಷ್ಟಿಯಲ್ಲಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ಬೀಡಿ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಬೀಡಿ ಮದ್ದೂರ್‌ ಸಂಘವನ್ನು ರಚನೆ ಮಾಡಿ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು,. ಅದೇ ರೀತಿ ಮೋಟಾರ್ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಮೋಟಾರ್ ಮದ್ದೂರ್ ಸಂಘವನ್ನು ರಚನೆ ಮಾಡಿ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇರುವ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ದೃಷ್ಟಿಯಲ್ಲಿ ಬಿ.ಎಂ.ಎಸ್ ಕೆಲಸ ಮಾಡಲಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಾಗಿ ಹಾಗೂ ಇತರ ಬೇರೆ ಬೇರೆ ವಿಭಾಗದಲ್ಲಿ ಗೌರವ ಸಂಭಾವಣೆಯಲ್ಲಿ ದುಡಿಯುವ ಜನರ ಪರವಾಗಿ ಕೆಲಸ ಮಾಡುವ ಬಗ್ಗೆ ಪ್ರಯತ್ನದಲ್ಲಿದ್ದೇವೆ.

ಈಗಾಗಲೇ ಬೆಳ್ತಂಗಡಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಿ.ಎಂ.ಎಸ್ ಗ್ರಾಮ ಸಮಿತಿಗಳನ್ನು ರಚನೆ ಮಾಡಿ, ಅನೇಕ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದು,. ಸರಕಾರದ ಆಹಾರಕಿಟ್, ಸ್ಯಾನಿಟರಿಕಿಟ್, ಆರ್ಥಿಕ ಪ್ಯಾಕೆಜ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ. ಇದೀಗ ತಾಲೂಕಿನ ಎಲ್ಲಾ ಕಾರ್ಮಿಕರಿಗೆ ಒಳ್ಳೆಯ ಸೇವೆಯನ್ನು ನೀಡಲು ಮತ್ತು ಕಾರ್ಮಿಕರನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸಲು ಸ್ಥಳಾಂತರಗೊಂಡು ಸುವ್ಯವಸ್ಥಿತವಾಗಿ ರಚನೆಗೊಂಡ ನೂತನ ಕಛೇರಿಯನ್ನು ಅ.18 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಪ್ರಭಾಕರ ಭಟ್‌ ರವರು ಉದ್ಘಾಟಿಸಲಿದ್ದಾರೆ.  ಇದೇ ಸಂದರ್ಭದಲ್ಲಿ ಕಾರ್ಮಿಕ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿದ್ದು, ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ ಸಿಂಹ ನಾಯಕ್, ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಇ, ಬೆಳ್ತಂಗಡಿ ಪ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ ಸೇರಿದಂತೆ ಅನೇಕ ಗಣ್ಯರು  ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ  ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಸದಸ್ಯ ವಿಜಯ್ ಜಿ. ಅರಳಿ, ಜನರಲ್ ಮೋಟಾರ್ ಮಜ್ದೂರ್ ಸಂಘದ ತಾಲೂಕು ಪ್ರತಿನಿಧಿ ಜನಾರ್ದನ ಕಾನರ್ಪ, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷ ಸುರೇಶ್‌ ದಯಾನಂದ್‌, ಬೀಡಿ ಮಜ್ದೂರ್ ಸಂಘದ ಸಂಚಾಲಕಿ ಸಿ.ಕೆ ಚಂದ್ರಕಲಾ, ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ ಸಂಯೋಜಕ ಸಾಂತಪ್ಪ ಕಲ್ಮಂಜ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.