ಬೆಳ್ತಂಗಡಿಯ ಅಂಚೆ ಕಚೇರಿಯಲ್ಲಿ ಅಂಚೆ ಸಪ್ತಾಹ

ಬೆಳ್ತಂಗಡಿ: ಬೆಳ್ತಂಗಡಿ  ಅಂಚೆ ಕಚೇರಿಯಲ್ಲಿ ಅಂಚೆ ಸಪ್ತಾಹದ ಅಂಗವಾಗಿ ಬ್ಯಾಂಕಿಂಗ್ ದಿನಾಚರಣೆಯನ್ನು ಅ.12 ರಂದು ಆಚರಿಸಲಾಯಿತು.

ಪುತ್ತೂರು ಅಂಚೆ ವಿಭಾಗದ ಎಸ್.ಎಸ್.ಪಿ. ಡಾ|ಏಂಜಲ್ ರಾಜ್ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಹಕರಿಗೆ ಸರಳ ಹಾಗೂ ಸುಲಭ ಬ್ಯಾಂಕಿಂಗ್ ಸೇವೆ ನೀಡುವಲ್ಲಿ ಅಂಚೆ ಇಲಾಖೆಯು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಹಕ ಸ್ನೇಹಿಯಾಗಿರುವ ಇಲಾಖೆ ತನ್ನ ನಿಗದಿತ ಸೇವೆಗಳ ಜೊತೆ ಇನ್ನಿತರ ಸಾರ್ವಜನಿಕ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರ ಸಂತೃಪ್ತಿಯೇ ಇಲಾಖೆಯ ಧ್ಯೇಯ ಎಂದರು.

ಪುತ್ತೂರು ಅಂಚೆ ವಿಭಾಗದ ಎ.ಎಸ್.ಪಿ. ಜೋಸೆಫ್ ರೋಡ್ರಿಗಸ್, ಹಿರಿಯ ಗ್ರಾಹಕರ ಎಂ.ಆರ್.ಜೈನ್, ಅಂಚೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಅಂಚೆ ನಿರೀಕ್ಷಕ ಸುಜಯ್ ಸ್ವಾಗತಿಸಿ, ಬೆಳ್ತಂಗಡಿ ಅಂಚೆ ಕಚೇರಿ ಅಧಿಕಾರಿ ಜ್ಯೋತಿ ಎಂ.ಆರ್.ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.