ರಸ್ತೆ ದಾಟುವ ವೇಳೆ ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ: ಶಿರ್ಲಾಲಿನ ತಾಯಿ ಮತ್ತು ಮಗು ದಾರುಣ ಮೃತ್ಯು

ಶಿರ್ಲಾಲು: ರಸ್ತೆ ದಾಟುತ್ತಿರುವ ವೇಳೆ ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ ಹೊಡೆದು ಶಿರ್ಲಾಲು ಗ್ರಾಮದ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟ ಘಟನೆ ಅ.12 ರಂದು ಬೆಳಿಗ್ಗೆ ಉಪ್ಪಿನಂಗಡಿ ಬಸ್ಸುತಂಗುದಾಣದ ಬಳಿ ನಡೆದಿದೆ.

ಶಿರ್ಲಾಲು ಮಸೀದಿ ಬಳಿ ವಾಸ್ತವ್ಯವಿರುವ ಸಿದ್ದಿಕ್ ಎಂಬವರ ಪತ್ನಿ ಸಾಹಿದಾ(25.) ಮತ್ತು ಅವರ ಒಂದು ವರ್ಷ ಪ್ರಾಯದ ಮಗು ಸಾಹಿಲ್ ಎಂಬವರೇ ಘಟನೆಯಲ್ಲಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ಉಪ್ಪಿನಂಗಡಿ ಬಸ್ಸು ತಂಗುದಾಣದ ಬಳಿ  ಸಾಹಿದಾ ರವರು ತಮ್ಮ ಮಗುವಿನೊಂದಿಗೆ ರಸ್ತೆ ದಾಟುತ್ತಿರುವ ವೇಳೆ ವೇಗವಾಗಿ  ಬಂದ ಕೆಎಸ್ಸಾರ್ಟಿಸಿ ಬಸ್ಸು  ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಮುಗ್ಗರಿಸಿ ಬಿದ್ದ ಇವರಿಬ್ಬರ ಮೇಲೆ ಬಸ್ ಚಲಿಸಿ ಈ ದುರ್ಘಟನೆ ಸಂಭವಿಸಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ನಡೆದ ಕೂಡಲೇ ಸೇರಿದ ಸಾರ್ವಜನಿಕರು ಬಸ್ ಚಾಲಕನ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.