ಧರ್ಮಸ್ಥಳ: ವಿ.ಟಿ.ಯು. ರ್‍ಯಾಂಕ್ ವಿಜೇತನಿಗೆ ಡಾ. ಹೆಗ್ಗಡೆ ಅಭಿನಂದನೆ

ಉಜಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ( V.T.U)2020 ನೇ ಸಾಲಿನ ಬಿ. ಇ. ಪರೀಕ್ಷೆಯಲ್ಲಿ ಆರನೇ ರ್‍ಯಾಂಕ್ ಪಡೆದು ಪ್ರಸ್ತುತ ಕ್ಯಾಂಪಸ್ ನೇಮಕಾತಿಯ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (EEE) ವಿಭಾಗದ ವಿದ್ಯಾರ್ಥಿ ತನುಜ್ ಶೆಣೈ ಅವರನ್ನು ಶಿಕ್ಷಣ ಸಂಸ್ಧೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ವಿದ್ಯಾರ್ಥಿಯ ಸಾಧನೆಯು ಇತರರಿಗೆ ಮಾದರಿಯಾಗಲೆಂದು ಹಾರೈಸಿದರು.
ಶಿಕ್ಷಣ ಸಂಸ್ಧೆಯ ಕಾರ್ಯದರ್ಶಿಗಳಾದ ಡಾ| ಬಿ. ಯಶೋವರ್ಮ, ತನುಜ್ ಶೆಣೈಯ ತಂದೆ-ತಾಯಿ ವಿಟ್ಲ ನಿವಾಸಿಗಳಾಗಿರುವ ತುಳಸಿದಾಸ್ ಶೆಣೈ ಮತ್ತು ಜ್ಯೋತಿ ಶೆಣೈ ಮತ್ತು ಪ್ರಾಂಶುಪಾಲರಾದ ಡಾ| ಅಶೋಕ್ ಕುಮಾರ್, ವಿಭಾಗ ಮುಖ್ಯಸ್ಥರಾದ ಡಾ| ಮಂಜುನಾಥ್, ಗ್ರಂಥಪಾಲಕಿ ಡಾ| ರಜತ, ಸಿವಿಲ್ ವಿಭಾಗದ ಸುಬ್ರಹ್ಮಣ್ಯ ಶರ್ಮ ಜತೆಯಲ್ಲಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.