ಇಕೋಫ್ರೆಷ್ ಎಂಟರ್ಪ್ರೈಸಸ್ ಸಂಸ್ಥೆಯಿಂದ ಪುತ್ತೂರಿನಲ್ಲಿ ಸಿಟಿ ವಾಕ್ ಕಾರ್ಯಕ್ರಮ

ಬೆಳ್ತಂಗಡಿ: ಇಕೋಫ್ರೆಸ್ ಎಂಟರ್ಪ್ರೈಸ್ ಸಂಸ್ಥೆಯು ಬೆಳ್ತಂಗಡಿಯಲ್ಲಿ ಕಳೆದ 9 ವರ್ಷಗಳಿಂದ ಗುಣಮಟ್ಟದ ಕೃಷಿ ಯಂತ್ರೋಪಕರಣಗಳನ್ನು ಕೃಷಿಕರಿಗೆ ವಿತರಿಸುವ ಮೂಲಕ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತಿದೆ.

ಆಧುನಿಕ ಕೃಷಿ, ಹೈನುಗಾರಿಕೆ ಯಂತ್ರೋಪಕರಣ, ಪವರ್ ಟೂಲ್ಸ್ , ಜನರೇಟರ್ ಗಳ ಸೇವಾ ಮಾರಾಟ ಮಳಿಗೆಯಾದ ಇಕೋಫ್ರೆಸ್ ಎಂಟರ್ಪ್ರೈಸ್ ಸಂಸ್ಥೆಯ ನೂತನ‌ ಸಂಸ್ಥೆಯು ಪುತ್ತೂರು ದರ್ಬೆಯ ಹಿತ ಆಸ್ಪತ್ರೆಯ ಎದುರು ಅಕ್ಟೋಬರ್ 15 ರಂದು ಶುಭಾರಂಭಗೊಳ್ಳಲಿದ್ದು, ಅದರ ಪೂರ್ವ ಪ್ರಚಾರದ ಹಿನ್ನಲೆಯಲ್ಲಿ ಪುತ್ತೂರು ಸಿಟಿ ವಾಕ್ ಕಾರ್ಯಕ್ರಮ ನಡೆಯಿತು.

ಪುತ್ತೂರು ಪ್ರೆಸ್ ಕ್ಲಬ್ ಅದ್ಯಕ್ಷ ಶ್ರವಣ್ ಕುಮಾರ್ ನಾಳ ಸಿಟಿ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಸಂತೋಷ್ ಶೆಟ್ಟಿ ಭಾಗವಹಿಸಿದರು.

ಇಕೋ ಫ್ರೆಸ್ ಎಂಟರ್ಪ್ರೈಸ್ ಮಾಲಕ ರಾಕೇಶ್ ಹೆಗ್ಡೆ ಬಳಂಜ ಅತಿಥಿ ಗಣ್ಯರನ್ನು ಸ್ವಾಗತಿಸಿ, ತಮ್ಮ ನೂತನ ಸಂಸ್ಥೆಗೆ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಧನುಷಾ ರಾಕೇಶ್ ಹೆಗ್ಡೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.