ಕಳಿಯ ಗ್ರಾಮದ ದಯಾನಂದ ಗೌಡ ನಾಪತ್ತೆ: ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಇಲ್ಲಿಯ ಕಲ್ಕುರ್ಣಿ ನಿವಾಸಿ ದಯಾನಂದ ಗೌಡ(45.) ಎಂಬವರು ಕೆಲಸದ ನಿಮಿತ್ತ ಅ.10 ರಂದು ಮನೆಯಿಂದ ಪುತ್ತೂರಿನಲ್ಲಿರುವ ಪತ್ನಿಯ ತವರು ಮನೆಗೆ ಹೋದವರು ಇದುವರೆಗೂ ಮರಳಿ ಬಾರದೆ ನಾಪತ್ತೆಯಾಗಿರುತ್ತಾರೆ.
ಈ ಬಗ್ಗೆ ದಯಾನಂದ ಗೌಡರವರ ಪತ್ನಿ ಅನಿತಾ ಕೆ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಯಾನಂದ ಗೌಡ ರವರು ಅಂದು ಬೆಳಿಗ್ಗೆ ತಮ್ಮ ಪತ್ನಿ ಅನಿತಾ ರವರ ತವರು ಮನೆಯಾದ ಪುತ್ತೂರಿನ ಈಶ್ವರಮಂಗಳದ ಕೊಪ್ಪಳ ಎಂಬಲ್ಲಿಗೆ ಅಗತ್ಯ ಕೆಲಸದ ನಿಮಿತ್ತ ಮನೆಯಿಂದ ತೆರಳಿದ್ದರು. ಅಂದು ಸಂಜೆ 5 ಗಂಟೆಯ ವೇಳೆ ಕಾವು ಬಸ್ಸು ತಂಗುದಾಣದಲ್ಲಿ ಭಾವ(ಪತ್ನಿಯ ಅಣ್ಣ) ಪದ್ಮನಾಭ ರವರು ಅವರನ್ನು ಬಸ್ಸು ಹತ್ತಿಸಿ ಕಳುಹಿಸಿಕೊಟ್ಟಿದ್ದರು. ಬಳಿಕ 5.30ರ ವೇಳೆ ಸ್ಥಳೀಯರಾದ ವಿನೋದ್ ಕುಮಾರ್ ಎಂಬವರಿಗೆ ಕರೆ ಮಾಡಿ ಮಾತನಾಡಿದ್ದರು.
ಬಳಿಕ ಪತ್ನಿ ಅನಿತಾರವರು ಹಲವು ಬಾರಿ ತಮ್ಮ ಪತಿಯ ಮೊಬೈಲ್ ಫೋನ್‌ಗೆ ಕರೆಮಾಡಿದ್ದರೂ ಸಹ ಕರೆಯನ್ನು ಸ್ವೀಕರಿಸದೇ ಇದ್ದು, ಇದುವರೆಗೂ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. ಸುಮಾರು 5.5 ಅಡಿ ಎತ್ತರವಿರುವ ದಯಾನಂದರವರು, ಮನೆಯಿಂದ ಹೊರಡುವಾಗ ಗುಲಾಬಿ ಬಣ್ಣದ ಅಂಗಿ ಮತ್ತು ಕಾಫಿ ಬಣ್ಣದ ಪ್ಯಾಟ್ ಧರಿಸಿದ್ದರು. ಅಲ್ಲದೆ ಒಂದು ಚಿನ್ನದ ಉಂಗುರ ಹಾಗೂ ಚಿನ್ನದ ಚೈನು ಧರಿಸಿದ್ದರು ಎಂಬುವುದಾಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರಮ ವ್ಯಕ್ತಿಯ ಶೋಧ ಕಾರ್ಯ ಮುಂದುವರೆದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.