ವೇಣೂರು ಕಾಂಗ್ರೆಸ್ ವಲಯ ಸಮಿತಿ ಸಮಾವೇಶ; ಪ್ರಜಾ ಪ್ರತಿನಿಧಿಗಳ ಪದಗ್ರಹಣ 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು : ವೇಣೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಮಾವೇಶ ಮತ್ತು ಪ್ರಜಾ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮ ಅ.3 ರಂದು ವೇಣೂರಿನ ಗಾರ್ಡನ್ ವ್ಯೂ ಸಭಾಂಗಣದಲ್ಲಿ ನಡೆಯಿತು.

ಸಮಾವೇಶದಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಸಮಿತಿ ಅಧ್ಯಕ್ಷ-ಕಾರ್ಯದರ್ಶಿಗಳನ್ನು ಗುರುತಿಸುವಿಕೆ, ನಗರ ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ  ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಗಂಗಾಧರ ಗೌಡ , ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬ್ದುಲ್  ರಹಿಮಾನ್ ಪಡ್ಪು, ಹಿಂದುಳಿದ ವರ್ಗಗಳ ಘಟಕ ಜಿಲ್ಲಾ ಪದಾಧಿಕಾರಿಗಳಾದ ಸತೀಶ್ ಹೆಗ್ಡೆ, ಯೋಗೀಶ್ ಸುವರ್ಣ, ಹಿಂದುಳಿದ ವರ್ಗ ಘಟಕ ನಗರ ಅಧ್ಯಕ್ಷ ದಯಾನಂದ ದೇವಾಡಿಗ, ಗ್ರಾಮೀಣ ಅಧ್ಯಕ್ಷ ಶುಭಿತ್ ಕುಮಾರ್, ಮುಖಂಡರಾದ ದೇಜಪ್ಪ ಶೆಟ್ಟಿ, ತೋಮಸ್ ನೋರೋನ್ಹಾ, ದಿವಾಕರ ಭಂಡಾರಿ ನಾರಾವಿ, ರಮೇಶ್ ಪೂಜಾರಿ ಪಡ್ಡಯಿಮಜಲು, ಶಶಿಧರ ಶೆಟ್ಟಿ ಪೇರಡ್ಕ. ವಲಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿ,ಸೋಜ ಮತ್ತು ಕಾಂಗ್ರೆಸ್ ಕಾರ್ಯಕರ್ತರು  ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

ಇದೇ ವೇಳೆ ಭಾಸ್ಕರ ಬಲ್ಯಾಯ, ಕೂಕ್ರ ಪೂಜಾರಿ, ಮಹಮ್ಮದ್ ವೇಣೂರು, ಲಿಂಗಯ್ಯ ಹೆಗ್ಡೆ, ರೈಮಂಡ್ ಲೋಬೊ ಕರಿಮಣೇಲು, ಕರಿಯ ನಾಯ್ಕ ಕರಿಮಣೇಲು, ಶೀನ ಮೂಡುಕೋಡಿ ಇವರುಗಳನ್ನು ಸನ್ಮಾನಿಸಲಾಯಿತು.

ದಿಶಾ ಮತ್ತು ದೀಕ್ಷಾ ಪ್ರಾರ್ಥಿಸಿ, ವಲಯ ಕಾಂಗ್ರೆಸ್ ಸಮಿತಿ ವೇಣೂರು ಅಧ್ಯಕ್ಷ ಪ್ರಭಾಕರ ಹೆಗ್ಡೆ ಸ್ವಾಗತಿಸಿ,  ಸತೀಶ್ ಹೆಗ್ಡೆ ವಂದಿಸಿದರು. ರಾಕೇಶ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.