ಭಾರತೀಯ ವೈದಕೀಯ ಸಂಘದ ಪ್ರ.ಕಾರ್ಯದರ್ಶಿಯಾಗಿ ಡಾ| ಸದಾನಂದ ಪೂಜಾರಿ ಆಯ್ಕೆ

ಬೆಳ್ತಂಗಡಿ: ಪ್ರತಿಷ್ಠಿತ ಭಾರತೀಯ ವೈದಕೀಯ ಸಂಘ (Indian medical association) ದಕ್ಷಿಣ ಕನ್ನಡ ಜಿಲ್ಲಾ ವಿಭಾಗ ಇದರ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ತಾಲೂಕಿನವರಾದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ.
ಜನಸ್ನೇಹಿ, ಸಮಾಜಮುಖಿ ಹೆಸರಾಂತ ವೈದ್ಯರಾಗಿರುವ ಡಾ. ಸದಾನಂದ ಪೂಜಾರಿಯವರು ಕಳೆದ ಹಲವು ವರ್ಷಗಳಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಪ್ರತಿ ದಿನ 60 ಮಂದಿಗೆ ಡಯಾಲಿಸಿಸ್ ಮಾಡುವ ಮೂಲಕ ರಾಜ್ಯದಲ್ಲಿಯೇ ದ್ವೀತಿಯ ಸ್ಥಾನ ಪಡೆದ ಕೀರ್ತಿಗೆ ವೆನ್ಲಾಕ್ ಆಸ್ಪತ್ರೆ ಪಾತ್ರವಾಗಿದೆ. ಇದಕ್ಕೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿಯವರ ಅವಿರತ ಶ್ರಮ ಸೇವೆಯೆ ಪ್ರಯತ್ನವೇ ಪ್ರಮುಖವಾಗಿದೆ.

ಡಾ. ಸದಾನಂದ ಪೂಜಾರಿಯವರು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಅಂಗಡಿಬೆಟ್ಟು ನಿವಾಸಿಯಾಗಿದ್ದರೆ. ಇವರ ಸೇವಗೆ ಜೇಸಿಐ ಅತ್ಯುತ್ತಮ ಯಂಗ್ ಇಂಡಿಯನ್ ಆವಾರ್ಡ್, ಕರ್ನಾಟಕ ಸೇವಾ ಪ್ರತಿಷ್ಠಾನದಿಂದ ಸಾಮಾಜಿಕ ಸೇವಾ ಪುರಸ್ಕಾರ, ಬೆಸ್ಟ್ ಸರ್ಜನ್ ಆವಾರ್ಡ್, ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.