ಮೈರೋಳ್ತಡ್ಕ ಬಿಜೆಪಿ ಬೂತ್ ಸಮಿತಿಯಿಂದ ಪಂಡಿತ್ ದೀನದಯಾಳ್ ಜನ್ಮ ದಿನಾಚರಣೆ

ಬಂದಾರು: ಇಲ್ಲಿಯ ಮೈರೋಳ್ತಡ್ಕ ಬಿಜೆಪಿ ಬೂತ್ ಸಮಿತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮ ದಿನಾಚರಣೆಯನ್ನು  ಬೂತ್ ಅಧ್ಯಕ್ಷ  ಪ್ರಶಾಂತ್ ಗೌಡರ ಮನೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡಲ ಉಪಾಧ್ಯಕ್ಷ  ಕೃಷ್ಣಯ್ಯ ಆಚಾರ್ಯ, ಬಂದಾರು ಶಕ್ತಿ ಕೇಂದ್ರದ ಪ್ರಮುಖ್ ಅಶೋಕ ‌ಗೌಡ ಪಾಂಜಾಳ, ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ, ಕಾರ್ಯದರ್ಶಿ ಜನಾರ್ದನ ಗೌಡ, ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ. ಕೆ.ಗೌಡ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ  ಅಧ್ಯಕ್ಷ  ಬಾಬು ಗೌಡ, ಗ್ರಾ.ಪಂ‌ ಸದಸ್ಯರಾದ ದಿನೇಶ್ ‌ಗೌಡ ಖಂಡಿಗ,  ಸುಚಿತ್ರಾ ‌ಮೂರ್ತಾಜೆ, ಯುವಮೋರ್ಚಾ ಸಂಚಾಲಕರಾದ ಗಿರೀಶ್ ಗೌಡ ಬಿ.ಕೆ ಚಿರಾಮೃತ, ಲೋಹಿತ್ ಬೊಲೋಡಿ, ಜಯಪ್ರಕಾಶ್ ಮೈರೋಳ್ತಡ್ಕ ಮೊದಲಾದವರು  ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತ ಬಾಬು ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಪೋಸ್ಟ್ ಕಾರ್ಡ್‌ ಅಭಿಯಾನಕ್ಕೆ‌ ಚಾಲನೆ‌ ನೀಡಲಾಯಿತು. ಬೂತ್ ಕಾರ್ಯದರ್ಶಿ ಜನಾರ್ದನ ಗೌಡ ‌ಸ್ವಾಗತಿಸಿ, ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.