ಮೈರೋಳ್ತಡ್ಕದಲ್ಲಿ “ರೈತ ಕ್ಷೇತ್ರ ಪಾಠ ಶಾಲೆ” ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಬಗ್ಗೆ ತರಬೇತಿ ಕಾರ್ಯಕ್ರಮ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದಲ್ಲಿ “ರೈತ ಕ್ಷೇತ್ರ ಪಾಠ ಶಾಲೆ ” ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಬಗ್ಗೆ ತರಬೇತಿ ಕಾರ್ಯಕ್ರಮವು ಸೆ.19 ರಂದು ಮೈರೋಳ್ತಡ್ಕ ಶಾಲೆಯಲ್ಲಿ ನಡೆಯಿತು.

ಪಶುಚಿಕಿತ್ಸಾಲಯ ಉಜಿರೆಯ ಪಶುವೈದ್ಯಾಧಿಕಾರಿ ಡಾ. ಕಾರ್ತಿಕ್ ರವರು ಲಾಭದಾಯಕ ಹೈನುಗಾರಿಕೆ, ದನ ಕರುಗಳ ಪೋಷಣೆಯ ಬಗ್ಗೆ, ಅವುಗಳಿಗೆ ಬಾಧಿಸುವ ರೋಗಗಳು ಮತ್ತು ಅದಕ್ಕೆ ನೀಡಬಹುದಾದ ಚಿಕಿತ್ಸೆ ಯ ಬಗ್ಗೆ ಮಾಹಿತಿ ನೀಡಿದರು. ದ. ಕ ಜಿಲ್ಲಾ ಕೆ. ಎಂ. ಎಫ್ ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಅರ್ಕಜೆ ರವರು ಹಾಲುಉತ್ಪಾದಕರಿಗೆ ಸರಕಾರದಿಂದ ಹಾಗೂ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಕಣಿಯೂರು ವಲಯ ಒಕ್ಕೂಟದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ, ವಲಯ ಮೇಲ್ವಿಚಾರಕಿ ಪ್ರೇಮ,ಬಂದಾರು ಒಕ್ಕೂಟದ ಅಧ್ಯಕ್ಷೆ ಶ್ರೀಲತಾ, ಪದ್ಮುಂಜಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಾಬು ಗೌಡ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಿನೇಶ್ ಖಂಡಿಗ, ವಿಪತ್ತು ನಿರ್ವಹಣೆ ಘಟಕದ ಸದಸ್ಯರು, ನವಜೀವನ ಸಮಿತಿ ಮತ್ತು ಪ್ರಗತಿ ಬಂಧು ತಂಡದ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಚಂದ್ರಕಲಾ ಮೊಗ್ರು ರವರು ಕಾರ್ಯಕ್ರಮ ನಿರೂಪಿಸಿ, ಬಂದಾರು ಸೇವಾಪ್ರತಿನಿಧಿ ನಿರಂಜನ್ ರವರು ಧನ್ಯವಾದಗೈದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.