ಯಕ್ಷಗಾನ ಕಲಾವಿದ ಸೂರ್ಯನಾರಾಯಣ ಭಟ್ ಬಳ್ಳಮಂಜರವರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು : ಬೆಳ್ಳಾರೆಯ ಮೂಲದವರಾದ ಪ್ರಸ್ತುತ ಬಳ್ಳಮಂಜದ ನಿವಾಸಿಯಾಗಿರುವ, “ಜಲಜಸಖ” ಎಂಬ ಕಾವ್ಯನಾಮದಿಂದ ಬರೆಯುತ್ತಿರುವ, ಹಿರಿಯ ಯಕ್ಷಗಾನ ಸಾಧಕರಾಗಿರುವ, ಬೆಳ್ಳಾರೆ ಸೂರ್ಯನಾರಾಯಣ ಭಟ್ ರವರ ಕಲೆ ಮತ್ತು ಸಾಹಿತ್ಯಕ ಸೇವೆಯನ್ನು ಗುರುತಿಸಿ, ಬೆಳ್ಳಾರೆ ಜೇಸೀಐಯವರು ಜೇಸೀ ಸಪ್ತಾಹದ ಅಂಗವಾಗಿ, ಅವರ ನಿವಾಸದಲ್ಲಿ ಸನ್ಮಾನಿಸಿದರು.

ಕನ್ನಡ, ತುಳು, ಮಲೆಯಾಳಂ, ಹವಿಕನ್ನಡ, ಸಂಸ್ಕೃತ ಈ ಭಾಷೆಗಳಲ್ಲಿ ಬರೆಯಬಲ್ಲ ಸಾಮರ್ಥ್ಯ ಹೊಂದಿರುವ ಸೂರ್ಯನಾರಾಯಣ ಭಟ್ಟರು ಚುಟುಕು, ಭಜನೆ, ಶ್ಲೋಕ, ಯಕ್ಷಗಾನ, ಕಥೆ , ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಸುಮಾರು ನಲ್ವತ್ತೈದಕ್ಕಿಂತ ಅಧಿಕ ಕೃತಿಗಳನ್ನು ಬರೆದಿದ್ದಾರೆ. ಯಕ್ಷಗಾನ ಕಲಾವಿದರೂ ಸಂಘಟರೂ ಆಗಿರುವ ಇವರಿಂದ, ಕಳೆದ ಐದು ದಶಕಗಳ ಕಲಾ ಸೇವೆ ಯಕ್ಷಗಾನ ಕ್ಷೇತ್ರಕ್ಕೆ ಸಂದಿದೆ. ಇವರನ್ನು ಅಭಿನಂದಿಸಿ ಮಾತನಾಡಿದ, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು “ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಯಕ್ಷಗಾನದ ಸರ್ವಾಂಗೀಣ ಕಲಾವಿದರು. ಆರ್ಥಿಕ ಸವಾಲುಗಳ ನಡುವೆ ಇವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ಕೊಡುಗೆ ಅಪೂರ್ವ. ದೇರಾಜೆ, ಶೇಣಿ, ಸಾಮಗ, ಪೆರ್ಲ, ಕುಬಣೂರು, ಮಂಡೆಚ್ಚ ಮೊದಲಾದವರೊಡನಾಟದಲ್ಲಿ ಬೆಳೆದ ಇವರು ಯಕ್ಷಗಾನ ಪರಂಪರೆಯ ಓರ್ವ ಹಿರಿಯ ನೇತಾರರು. ಸಾತ್ವಿಕ ಸ್ವಭಾವದ ಮತ್ತು ಹೃದಯ ಶ್ರೀಮಂತಿಕೆಯ, ಎಂಬತ್ತೆರಡು ವರುಷದ ಹರೆಯದಲ್ಲೂ ಇವರ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಪ್ರೀತಿ ಹಾಗೂ ಕ್ರತು ಶಕ್ತಿ ಪ್ರೇರಣಾದಾಯಕ” ಎಂದು ನುಡಿದರು.

ಯಕ್ಷಗಾನ ಕಲಾವಿರಾದ ರವಿಶಂಕರ ವಳಕ್ಕುಂಜ ಮತ್ತು ರಾಮಾ ಜೊಯಿಸ್ ಬೆಳ್ಳಾರೆಯವರು ಫಲ ತಾಂಬೂಲ ಸನ್ಮಾನ ಪತ್ರ ಸಮರ್ಪಿಸಿ, ಇಪ್ಪತ್ತೇಳು ಸಾವಿರ ರೂ.ಗಳ ಕಾಣಿಕೆಯನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಸರಸ್ವತಿ ಮತ್ತು ಪುತ್ರ ಶ್ರೀನಿವಾಸ್ ರವರು ಜೊತೆಗಿದ್ದರು. ಸಮಾರಂಭದಲ್ಲಿ ಜೇಸೀಯ ಪೂರ್ವಾಧ್ಯಕ್ಷರುಗಳಾದ ಪ್ರೀತಂ ರೈ ಪೆರುವಾಜೆ, ಲಿಂಗಪ್ಪ ಬೆಳ್ಳಾರೆ, ಜಯರಾಮ ಉಮಿಕ್ಕಳ, ನಿಕಟಪೂರ್ವಾಧ್ಯಕ್ಷ ವೀರನಾಥ ಪಡ್ಪು , ಕಾರ್ಯದರ್ಶಿ ಜಗದೀಶ್ ರೈ ಪೆರುವಾಜೆ, ಭಾರವಿ ಚೂಂತಾರು ಮೊದಲಾದವರು ಉಪಸ್ಥಿತರಿದ್ದರು.

ಜೇಸೀಯ ಪೂರ್ವಾಧ್ಯಕ್ಷರಾದ ಪನ್ನೆ ಜೇಸೀ ಪ್ರದೀಪ್ ಕುಮಾರ್ ರೈ ಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜೇಸೀಯ ಅಧ್ಯಕ್ಷರಾದ ಜೇಸೀ ಪದ್ಮನಾಭ ಕಲಾಸುಮ ರವರು ಧನ್ಯವಾದ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.