ಗುರುವಾಯನಕೆರೆ, ಕಣಿಯೂರು ಪದ್ಮುಂಜ ವಲಯದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಗುರುವಾಯನಕೆರೆ, ಕಣಿಯೂರು ವಲಯದ ಪದ್ಮುಂಜ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

ಮಹಿಳೆಯರು ಮನೆಯಲ್ಲೇ ಕೈಗೊಳ್ಳಬಹುದಾದ ಸ್ವ ಉದ್ಯೋಗದ ಬಗ್ಗೆ ಉಷಾ ಮಾಹಿತಿಯನ್ನು ವಿವರಿಸುತ್ತಾ, ಸಣ್ಣ ಪ್ರಮಾಣದಲ್ಲಿ, ಕಡಿಮೆ ಬಂಡವಾಳ ಹೂಡಿಕೆಯಲ್ಲಿ ತೊಡಗಬಹುದಾದ ಉದ್ಯೋಗದ ಬಗ್ಗೆ ತಿಳಿಸಿಕೊಟ್ಟರು, ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಿನ ಕೃಷಿ ಅಧಿಕಾರಿ ಭಾಸ್ಕರ್ ರವರು ಸ್ವ ಉದ್ಯೋಗದಲ್ಲಿ ತರಕಾರಿ, ಮಲ್ಲಿಗೆ, ಬೆಳೆ ಅತೀ ಬೇಡಿಕೆಯ ಬೆಳೆಯಾಗಿದ್ದು ಇದನ್ನೂ ಕೂಡ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷ ರಮಾನಂದ ಪೂಜಾರಿ, ವಲಯ ಮೇಲ್ವಿಚಾರಕಿ ಪ್ರೇಮಾ, ಸೇವಾ ಪ್ರತಿನಿಧಿಯವರಾದ ಅರ್ಪಿತಾ, ವಸಂತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉರುವಾಲು ನವಜೀವನ ಸಮಿತಿ ಸದಸ್ಯರಾದ ಜಾರಪ್ಪ ನಾಯ್ಕರವರು ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಅಖಿಲ ಕರ್ನಾಟಕ ಜನಜಾಗ್ರತಿ ವತಿಯಿಂದ 10,000 ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ದೇವಿಪ್ರಸಾದ್, ಮೇಲ್ವಿಚಾರಕಿ ಪ್ರೇಮ, ಸೀತಾರಾಮ ಆಳ್ವ, ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.