ಮಡಂತ್ಯಾರು ಗ್ರಾಮ ಪಂಚಾಯತಕ್ಕೆ 2ನೇ ಬಾರಿಗೆ ಒಲಿದು ಬಂದ ಗಾಂಧಿ ಗ್ರಾಮ ಪುರಸ್ಕಾರ

ಮಡಂತ್ಯಾರು:  2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯತ್ ಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಟ್ಟು ಆಯ್ಕೆಯಾಗಿರುವ 7 ಗ್ರಾಮ ಪಂಚಾಯತ್ ಗಳಲ್ಲಿ ಬೆಳ್ತಂಗಡಿ ತಾಲೂಕಿನ  ಮಡಂತ್ಯಾರು ಗ್ರಾ.ಪಂ.ಗೆ ಪುರಸ್ಕಾರ  ಒಲಿದು ಬಂದಿದೆ.

2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯತ್ ಗಳ ಆಯ್ಕೆ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೂಚನೆಯಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು  ಸಂಬಂಧಪಟ್ಟ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದು, ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ದ.ಕ. ಜಿಲ್ಲೆಯಾದ್ಯಂತ ಒಟ್ಟು 7 ಗ್ರಾಮ ಪಂಚಾಯತ್ ಗಳು ಆಯ್ಕೆಯಾಗಿರುತ್ತವೆ.

ಅದರಲ್ಲಿ ಜನಪರ ಕಾರ್ಯಕ್ರಮಗಳ ಆಯೋಜನೆ, ಅನೇಕ ಹೊಸತನಗಳ ಸಂಯೋಜನೆಯ ಮೂಲಕ ಹಳ್ಳಿಯ ವಿಧಾನಸಭೆಯ ನೆಲೆಯಲ್ಲಿ ಅನೇಕ ಹೊಸತನಗಳನ್ನು ಅಳವಡಿಸಿಕೊಂಡು ನಾಡಿಗೆ ಪರಿಚಿತವಾಗಿರುವ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಮಡಂತ್ಯಾರು ಗ್ರಾಮ ಪಂಚಾಯತ್ ಎರಡನೇ ಬಾರಿಗೆ ರಾಜ್ಯ ಸರ್ಕಾರ ಕೊಡ ಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದ್ದು , ಹೆಮ್ಮೆಯ ವಿಚಾರವಾಗಿದೆ.

ಬಯಲು ಶೌಚಮುಕ್ತ ಗ್ರಾಮವಾಗಿ ಈಗಾಗಲೇ ಗುರುತಿಸಿಕೊಂಡಿದ್ದು, ಎಲ್ಲಾ ಮನೆಗಳಲ್ಲೂ ಶೌಚಾಲಯಗಳಿವೆ. ತೆರಿಗೆ ವಸೂಲಾತಿಯಲ್ಲಿ ಶೇ.86 ಸಾಧನೆ ದಾಖಲಿಸಿದೆ. ವಿದ್ಯುತ್ ಹಾಗೂ ನೀರಿನ ಉಳಿತಾಯ ಕಾರ್ಯ, ತ್ಯಾಜ್ಯ ವಿಲೇವಾರಿಗಾಗಿ ವಾಹನ, ಇ-ತ್ಯಾಜ್ಯ ವಿಲೇವಾರಿ, ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ, ವಿದ್ಯುತ್ ಮತ್ತು ನೀರು ಉಳಿತಾಯ ಮಾಡುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸ್ಥಾವರಗಳಿಗೆ ಮೊಬೈಲ್ ಮೂಲಕ ಚಾಲನೆ ನೀಡುವ ವ್ಯವಸ್ಥೆ ಅಳವಡಿಸಲಾಗಿದೆ.  ಗ್ರಾ.ಪಂ ಕಚೇರಿಗೆ ಮಿಂಚು ಬಂಧಕ ಅಳವಡಿಕೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಸೋಲಾರ್ ಪಂಪ್ ಅಳವಡಿಕೆ, ಸೋಲಾರ್ ಗ್ರಿಡ್ ಹಾಗೂ ಸೋಲಾರ್ ಬೀದಿ ದೀಪಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಕುಡಿಯುವ ನೀರಿನ ಬಳಕೆ ಶುಲ್ಕ ವಸೂಲಿಗಾಗಿ ಸುಧಾರಿತ ತಂತ್ರಾಂಶ ಆಧಾರಿತ ಕಂಪ್ಯೂಟರ್ ಬಳಸಿ ಶುಲ್ಕದ ಬಿಲ್ ನೀಡುವುದು ಮತ್ತು ಶುಲ್ಕವನ್ನು ವಸೂಲಿ ಮಾಡುವ ವ್ಯವಸ್ಥೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಶೇಖರಣೆ ಕಡ್ಡಾಯವಾಗಿ ಜಾರಿ, ಪಂಚಾಯತ್ ವ್ಯಾಪ್ತಿಯ ಕುಕ್ಕಳಬೆಟ್ಟು ಬಳಿ ಮತ್ತು ಮಂಜಲಪಲ್ಕೆ ಬಳಿ ರುದ್ರಭೂಮಿ ನಿರ್ಮಾಣದ ಕಾಮಗಾರಿ ಅನುಷ್ಠಾನಿಸಿದೆ. ಗ್ರಾಮೀಣ ಯುವಜನತೆಗೆ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸ್ವಂತ ಆದಾಯದ ಕ್ರೀಯಾಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ ಟೈಲರಿಂಗ್ ಯಂತ್ರ ವಿತರಿಸುವ ಮೂಲಕ ಸ್ವಾವಲಂಬಿ ಬದುಕು ಮುನ್ನಡೆಸಲು ಸಹಕಾರ ನೀಡಲಾಗಿದೆ.

ಮಳೆನೀರು ಶುದ್ಧೀಕರಿಸಿ 2 ರೂ.ಗೆ 5 ಲೀ. ನೀರು:
ಮಳೆ ಕೊಯ್ಲು ಯೋಜನೆಯನ್ನು ಪಂಚಾಯತ್‌ನ ಸಭಾಂಗಣದಲ್ಲಿ ಅಳವಡಿಸಿ ನೀರನ್ನು ಭೂಮಿ ಅಡಿಯಲ್ಲಿ ನಿರ್ಮಿಸಲಾದ ಬೃಹತ್ ಸಂಪ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ವಿದ್ಯುತ್ ಪಂಪ್ ಮೂಲಕ ಟ್ಯಾಂಕಿಗೆ ಹಾಯಿಸಿ, ಶುದ್ಧ ನೀರಿನ ಘಟಕದ ಮೂಲಕ ರೂ. 2ಕ್ಕೆ 5.ಲೀಟರ್ ಕುಡಿಯುವ ನೀರನ್ನು ನೀಡುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.