ಧರ್ಮಸ್ಥಳದಲ್ಲಿ ಪುರಾಣ ವಾಚನ – ಪ್ರವಚನದ ಸುವರ್ಣ ಮಹೋತ್ಸವದ ಸಮಾರೋಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಪುರಾಣ ವಾಚನ, ಪ್ರವಚನದಿಂದ ಸುವಿಚಾರಗಳು ಹಾಗೂ ಬದುಕಿಗೆ ಉಪಯುಕ್ತವಾದ ಸಾರ್ಥಕ ಸಂದೇಶವನ್ನು ಕೇಳಿ ಮನಸ್ಸು ಪವಿತ್ರವಾಗುತ್ತದೆ. ಸಾಂಸಾರಿಕ ಹಾಗೂ ವ್ಯಾವಹಾರಿಕ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೆ.17 ರಂದು  ಧರ್ಮಸ್ಥಳದಲ್ಲಿ ಪವ್ರಚನ ಮಂಟಪದಲ್ಲಿ ಒಂದು ವಾರ ಕಾಲ ನಡೆದ ಪುರಾಣ ವಾಚನ – ಪ್ರವಚನದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಾಗವತದಲ್ಲಿ ಕೃಷ್ಣನ ಬಾಲಲೀಲೆ ಹಾಗೂ ತುಂಟಾಟವನ್ನು ಕಂಡು ಆನಂದಿಸಿ ಅನುಭವಿಸಬೇಕು. ಇದೇ ರೀತಿ ಬಾಲ್ಯದಲ್ಲಿ ಮಕ್ಕಳ ತುಂಟಾಟ ಸಹಜವಾಗಿಯೂ, ಸ್ವಾಭಾವಿಕವಾಗಿಯೂ ಇರುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳಲ್ಲಿ ಸಾರ್ಥಕ ಬದುಕಿನ ಸಂಕಟಗಳಿಗೆ, ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರವಿದೆ ಎಂದು ಅವರು ಹೇಳಿದರು.
ನಿವೃತ್ತ ತಹಶಿಲ್ದಾರ್ ಹಾಗೂ ಮೂಲತ: ಧರ್ಮಸ್ಥಳದ ನಿವಾಸಿಯಾದ ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ಸುರೇಶ ಕುದ್ರೆಂತ್ತಾಯ ರಚಿಸಿದ ಶ್ರೀ ರಾಮಕಥಾ ನಮನ ಕೃತಿಯನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಧರ್ಮಸ್ಥಳದಲ್ಲಿ ಬಾಲ್ಯದಿಂದಲೇ ಯಕ್ಷಗಾನದ ಕಲಾವಿದರು, ಪ್ರೇಕ್ಷಕರು ಹಾಗೂ ಅಭಿಮಾನಿಗಳು ಅನೇಕ ಮಂದಿ ಇದ್ದಾರೆ. ಯಕ್ಷಾಗನವನ್ನು ಕೇಳಿ, ನೋಡಿ, ಆನಂದಿಸಿ ಅವರು ಲೋಕ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ. ಯಾವುದೇ ಆವರಣ ಗೋಡೆಗಳಿಲ್ಲದ ಲೋಕ ಜ್ಞಾನದಿಂದ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿ ಕೊಂಡಿದ್ದಾರೆ.
ಸುರೇಶ ಕುದ್ರೆಂತ್ತಾಯರ ಕೃತಿ ಯಕ್ಷಗಾನ ರಂಗಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿ ಅವರನ್ನು ಹೆಗ್ಗಡೆಯವರು ಅಭಿನಂದಿಸಿದರು. ಆಸಕ್ತ ಅಧ್ಯಯನಾಸಕ್ತರಿಗೆ ಇದು ಮಾಹಿತಿಯ ಕಣಜವಾಗಿದೆ. ಆಕರ ಗ್ರಂಥವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಾಣ ವಾಚನ- ಪ್ರವಚನಕ್ಕೆ ವಿಷಯ ಹಾಗೂ ಕೃತಿಗಳ ಆಯ್ಕೆ ಬಗ್ಗೆ ಹೇಮಾವತಿ ವಿ. ಹೆಗ್ಗಡೆಯವರ ನಿರಂತರ ಮಾರ್ಗದರ್ಶನ, ಪ್ರೇರಣೆ ಹಾಗೂ ಪ್ರೋತ್ಸಾಹವನ್ನು ಅವರು ಶ್ಲಾಘಿಸಿದರು.

ವಾಚನಕಾರರು ಹಾಗೂ ಪ್ರವಚನಕಾರರನ್ನು ಆಯ್ಕೆ ಮಾಡಿ ಆಮಂತ್ರಿಸಿ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅವರ ಸಕ್ರಿಯ ಸಹಕಾರವನ್ನು ಹೆಗ್ಗಡೆಯವರು ಸ್ಮರಿಸಿ ಅಭಿನಂದಿಸಿದರು.
ತೊರವೆ ರಾಮಾಯಣದಲ್ಲಿ ಭರತನ ಭ್ರಾತೃ ಪ್ರೇಮದ ಬಗ್ಗೆ ಹಾಸನದ ಗಣೇಶ ಉಡುಪರು ವಾಚನ ಮಾಡಿದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.