ಉಜಿರೆ: ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗಾಂಧಿ ವಿಚಾರ ವೇದಿಕೆ, ಮಾತೃ ಸಮಿತಿ ಸಭೆಯು ಸೆ.16 ರಂದು ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಜರುಗಿತು. ಗಾಂಧಿ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ  ಶರತ್‌ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗಾಂಧಿ ವಿಚಾರ ವೇದಿಕೆ ಸ್ಥಾಪಕಾಧ್ಯಕ್ಷ ಶ್ರೀಧರ ಜಿ ಭಿಡೆ ಮಾತನಾಡಿ, ಗಾಂಧೀಜಿಯವರ ಸರಳತೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮಗೆ ಸಮಾಜದಲ್ಲಿ ಸಂದೇಶ ಪ್ರಚಾರ ಮಾಡಲು ಸಾಧ್ಯ. ಆದ್ದರಿಂದ ಚಾವಡಿ ಚರ್ಚೆಗಳ ಮೂಲಕವೇ ವಿಚಾರದ ಪ್ರಚಾರ ಆಗಬೇಕು. ನಮ್ಮದು ಯಾರಿಗೂ ಪ್ರತಿಸ್ಪರ್ಧಿ ಸಂಘಟನೆ ಅಲ್ಲ ಎಂದರು.

ಖ್ಯಾತ ವಿದ್ವಾಂಸ ವಿಷ್ಣು ಭಟ್ ಗೋಖಲೆ ಅವರು ಬರೆದ 1948ರ ಮುಂಡಾಜೆ ಎಂಬ ಗ್ರಂಥದಲ್ಲಿ ಉಲ್ಲೇಖಿತವಾದ ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮವನ್ನು ತಂದು ಮುಂಡಾಜೆ ಭಿಡೆ ತಿರುವು ಬಳಿ ನೆಡಲಾಗಿದ್ದ ಗಾಂಧಿ ಸ್ಮಾರಕ ಆಲದ ಮರದ ಪ್ರದೇಶವನ್ನು ಮುಂದಕ್ಕೆ ಜತಣದಿಂದ ಕಾಯ್ದುಕೊಂಡುಬರುವ ಉದ್ದೇಶದಿಂದ ಗಾಂಧಿ ಜಯಂತಿಯಂದು ಅಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು, ಗ್ರಾಮ‌ ಪಂಚಾಯತ್ ಸಹಾಯದಿಂದ ಗಾಂಧಿ ಸ್ಮಾರಕವನ್ನು ಸಂರಕ್ಷಿಸಿ ಅಂದು ಅದಕ್ಕೆ ಶಾಸಕರನ್ನು ಆಹ್ವಾನಿಸಿ ನಾಮಫಲಕ ಅಳವಡಿಸುವುದು ಇತ್ಯಾದಿ ವಿಚಾರಗಳ ಬಗ್ಗೆ  ಸಮಿತಿ ಸದಸ್ಯರೊಂದಿಗೆ ಚರ್ಚಿಸಲಾಯಿತು.

ತಾಲೂಕಿನಲ್ಲಿ ಪ್ರಸ್ತುತ ಇರುವ 7 ಜಿ.ಪಂ‌ ಕ್ಷೇತ್ರಗಳ ಮಟ್ಟದಲ್ಲಿ  ಉಪಾಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿ ಮುಂದಕ್ಕೆ ಅವರ ಮೂಲಕ ಸಮಿತಿಗಳನ್ನು ಗ್ರಾಮ ಮಟ್ಟಕ್ಕೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು.

ಗಾಂಧಿ ವಿಚಾರ ವೇದಿಕೆ ಕಾರ್ಯಾಧ್ಯಕ್ಷ ದೇವಿಪ್ರಸಾದ್, ಮಾತೃ ಸಮಿತಿ ಸಂಚಾಲಕ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ವಿಷಯ ಮಂಡಿಸಿದರು. ಸಂಯೋಜಕ ಕಾಂಚೋಡು ಗೋಪಾಲಕೃಷ್ಣ ಭಟ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ವಿನುತಾ ರಜತ ಗೌಡ, ಸಾಹಿತಿ ಅತುಲ್ ದಾಮ್ಲೆ, ಮಾತೃ ಸಮಿತಿ ಜತೆ ಕಾರ್ಯದರ್ಶಿ ಶಶಿಧರ ಠೋಸರ್, ಅಶ್ರಫ್ ಆಲಿ ಕುಂಞಿ, ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳು, ಮುಂತಾದವರು  ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕು ಸಮಿತಿ ಕಾರ್ಯದರ್ಶಿ ವಿದ್ಯಾಕುಮಾರ್ ಓಡಲ‌ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.