ಕರ್ನಾಟಕ ಮುಸ್ಲಿಂ ಜಮಾಅತ್ ಕಳಿಯ ಗ್ರಾಮ ಸಮಿತಿಯಿಂದ ಸನ್ಮಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಕರ್ನಾಟಕ ಮುಸ್ಲಿಮ್ ಜಮಾಅತ್ ಕಳಿಯ ಗ್ರಾಮ ಸಮಿತಿ ವತಿಯಿಂದ  ಭಾರತ ದೇಶದ 75 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಇಂಡಿಯೋತ್ಸವ-75 ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಇಲಾಖೆಯಲ್ಲಿ ಪ್ರಶಸ್ತಿ ಪುರಸ್ಕೃತರಾದವರಿಗೆ, ವಿವಿಧ ಇಲಾಖೆಗಳ ನಿವೃತ್ತ ನೌಕರರಿಗೆ , ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಹಾಗೂ ಮದರಸದಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಸೆ.16 ರಂದು ಗೇರುಕಟ್ಟೆಯ ಮನ್ ಶರ್ ಕ್ಯಾಂಪಸ್ ನಲ್ಲಿ  ನಡೆಯಿತು.

ಪರಪ್ಪು ಮಸೀದಿಯ ಖತೀಬ ಮಹಮ್ಮದ್ ತಾಜುದ್ದೀನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಸಮಿತಿ  ಅಧ್ಯಕ್ಷ  ಸೈಫುಲ್ಲಾ,ಎಚ್.ಎಸ್.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ  ಉಪ್ಪಿನಂಗಡಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ, ನಿವೃತ್ತ ಉಪನ್ಯಾಸಕ ಪ್ರೊ|ಮಧೂರು ಮೋಹನ ಕಲ್ಲೂರಾಯ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ಪಿ.ಶಿವಾನಂದ ಭಂಡಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ  ಯು.ಕೂಸಪ್ಪ ಕುಂದರ್, ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕೂಸಪ್ಪ ಗೌಡ ಹೀರ್ಯ, ವಿಠಲ ಶೆಟ್ಟಿ ಉಪ್ಪಡ್ಕ, ಶ್ರೀಧರ ಪೂಜಾರಿ ಮೆದಿನ , ಸಂಜೀವ ಗೌಡ ಹೀರ್ಯ, ದೂರವಾಣಿ ಇಲಾಖೆಯ ನಿವೃತ್ತ ಸಿಬ್ಬಂದಿ ಮೋಹನ ಗೌಡ, ಗಣೇಶ್ ಬೀಡಿ ಖಾಸಗಿ ಸಂಸ್ಥೆಯ ನಿವೃತ್ತ ಸಿಬ್ಬಂದಿ ಕೆ.ಎಮ್.ಶೇಖಬ್ಬ ಇವರುಗಳನ್ನು ಸನ್ಮಾನಿಸಲಾಯಿತು.

ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗೇರುಕಟ್ಟೆ ಪ್ರೌಢಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಆಯಿಷತುಲ್ ಸ್ವಾಲಿಹಾ, ಮನ್‌ಶರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಥಮ ಸ್ಥಾನಿ ಹಲೀಮಾ ರಿಶಾನ, ಮನಶರ್ ಮಂಬಾವುಲ್ ಮದರಸದ ಏಳನೇ ತರಗತಿಯಲ್ಲಿ ಪ್ರಥಮ ಸ್ಥಾನಿ ಶಂಸೀರ್, ಪರಪ್ಪು ಹಿದಾಯತು ಸ್ಸಿಬಿಯಾನ್ ಮದರಸದ 5ನೇ ತರಗತಿಯಲ್ಲಿ ಪ್ರಥಮ ಸ್ಥಾನಿ ಬಿ.ಎಚ್.ಫಿದಾ 7ನೇ ತರಗತಿಯಲ್ಲಿ ಪ್ರಥಮ ಸ್ಥಾನಿ ಫಾತಿಮತ್ ಜುವೈರಿಯಾ, 10ನೇ ತರಗತಿಯ ಪ್ರಥಮ ಸ್ಥಾನಿ ತಸ್ರೀನಾ ಇವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪರಪ್ಪು ಮಸೀದಿ ಅಧ್ಯಕ್ಷ  ಅಬೂಬಕ್ಕರ್ ಹಾಜಿ ಪೆಳತ್ತಲಿಕೆ, ಸಾದಿಕ್ ಮಲೆಬೆಟ್ಟು, ಮನ್ ಶರ್ ಸದರ್ ಉಸ್ತಾದ್ ಅಬ್ದುಲ್ಲ ಸಖಾಫಿ , ಅಶ್ರಫ್ ಆಲಿಕುಂಞ, ಉಸ್ಮಾನ್ ಹಾಜಿ ಆಲಂದಿಲ, ಎ.ಕೆ.ಅಹಮದ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ನೌಫಲ್.ಎಸ್.ಎ. ಸ್ವಾಗತಿಸಿ, ಮನ್ ಶರ್ ಸಂಸ್ಥೆ  ಪ್ರಾಂಶುಪಾಲ  ಹೈದರ್ ಮರ್ದಾಳ ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಮ್ಮದ್ ರಫಿ ಬೆಳ್ತಂಗಡಿ ಅಬಿನಂದನಾ ಭಾಷಣ ಮಾಡಿದರು. ಎಮ್. ಅಬ್ದುಲ್ ಕರೀಮ್ ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಕರೀಂ ಧನ್ಯವಾದವಿತ್ತರು.  ಸಿದ್ದಿಕ್.ಜಿ.ಎಚ್, ರಹಿಮಾನ್ ಮಾಸ್ಟರ್, ಪಯಾಝದ್ದಿನ್, ಮಹಮ್ಮದ್ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.