ಪಟ್ರಮೆ ಗ್ರಾಮದಲ್ಲಿ ಜನಜಾಗೃತಿ ಗ್ರಾಮ ಸಮಿತಿ ರಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ಸಂಯುಕ್ತಾಶ್ರಯದಲ್ಲಿ ಪಟ್ರಮೆ ಗ್ರಾಮದ ಗ್ರಾಮ ಸಮಿತಿ ಸಭೆಯನ್ನು ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಸತೀಶ್ ಉದ್ಘಾಟಿಸಿ, ಜನಜಾಗೃತಿ ವೇದಿಕೆಯ ಮೂಲಕ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವ ಪಣ ತೊಡಬೇಕು ಎಂದು ಕರೆ ನೀಡಿದರು.
ಶಿಬಿರಾಧಿಕಾರಿ ನಾಗರಾಜ್ ಗ್ರಾಮ ಮಟ್ಟದಲ್ಲಿ ನವಜೀವನ ಸಮಿತಿ ಬಲವರ್ಧನೆ-ಪುನಶ್ಚೇತನ, ಗ್ರಾಮ ಸುಭಿಕ್ಷಾ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂತನ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಧರ ಶಬರಾಯ, ಅಧ್ಯಕ್ಷರಾಗಿ ಮೋಹನ್, ಉಪಾಧ್ಯಕ್ಷರಾಗಿ ಸತೀಶ್ ಆಚಾರ್ಯ, ಅಜಿತ್, ಕಾರ್ಯದರ್ಶಿಯಾಗಿ ವನಿತಾ ಮತ್ತು ಗೌರವ ಸಲಹೆಗಾರರಾಗಿ ಜಾರಪ್ಪ ಗೌಡ, ಪಿಡಿಒ ರಿತೇಶ್ ಪುತ್ರನ್, ನಿರಂಜನ್ ಜೈನ್, ದೇವಪಾಲ ಅಜ್ರಿ , ಪ್ರಶಾಂತ್ ಶೆಟ್ಟಿ ದೇರಾಜೆ, ತಿಲಕ್, ಮನೋಜ್  ಇವರುಗಳು ಆಯ್ಕೆಯಾದರು.

ಸಭೆಯಲ್ಲಿ ಊರಿನ ಗಣ್ಯರು, ಪಂಚಾಯತ್ ಸದಸ್ಯರು, ಒಕ್ಕೂಟದ ಅಧ್ಯಕ್ಷ, ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.