ಕುತ್ತಿನ ಶ್ರೀ ಸಿದ್ದಿವಿನಾಯಕ ಭಜನ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಇಲ್ಲಿಯ ದತ್ತ ನಗರ ಕುತ್ತಿನ ಶ್ರೀ ಸಿದ್ದಿ ವಿನಾಯಕ ಭಜನ ಮಂದಿರದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಸೆ.13 ರಂದು ನಡೆಯಿತು.
ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸಿದ್ದಿ ವಿನಾಯಕ ದೇವರಿಗೆ  3 ತೆಂಗಿನ ಕಾಯಿ  ಗಣಪತಿ ಹವನ, ಪಂಚಕಜ್ಜಾಯ ಸೇವೆ ಹಾಗೂ ಮಹಾ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬಾಲ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಮಂಡಳಿಯ ಗೌರವಾಧ್ಯಕ್ಷರುಗಳಾದ ವೆಂಕಪ್ಪ ಮೂಲ್ಯ, ಕೊಂಬೆಟ್ಟು ಗೋಪಾಲ ಕೃಷ್ಣ ಶೇನೆಯಿ ಕಡoಬು, ಕೃಷ್ಣ ಪ್ರಭು ಮುದಲಡ್ಕ, ಧರ್ಣಪ್ಪ ಸಾಲ್ಯಾನ್ ಕುತ್ತಿನ, ಸುರೇಶ್ ಮೂಲ್ಯಕೊಂಬೆಟ್ಟು,ಗೋಪಾಲ ಪೂಜಾರಿ ಕೊಲಾಜೆ, ಗೋಪಾಲ ಪೂಜಾರಿ ಅಲೆಕ್ಕಿ, ಗೋಪಾಲ ಮೂಲ್ಯ ಕೊಂಬೆಟ್ಟು, ದೂಜ ಮುದಲಡ್ಕ ಹಾಗೂ ಮಂಡಳಿಯ ಸರ್ವಸದಸ್ಯರು, ಊರಿನ ಭಕ್ತಾಧಿಗಳು, ಉಪಸ್ಥಿತರಿದ್ದರು.

ಮಂಡಳಿ  ಅಧ್ಯಕ್ಷ ಹೊನ್ನಪ್ಪ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ್ ಕುಲಾಲ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.