ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಗಂಗಾಧರ ಮಿತ್ತಮಾರು ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಸುಲ್ಕೇರಿಮೊಗ್ರು ಗ್ರಾಮದ ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ರವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರ ಅಧ್ಯಕ್ಷತೆಯಲ್ಲಿ  ಸೆ.13 ರಂದು ದೇವಸ್ಥಾನದ ವಠಾರದಲ್ಲಿ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇವರನ್ನು ಸರ್ವಾನುಮತದಿಂದ  ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಸ್ಥಾನದ ಪ್ರಧಾನ ಅರ್ಚಕ ಎ.ಸೋಮನಾಥ ಮಯ್ಯ, ಸದಾನಂದ ಮಲೆಕುಡಿಯ, ವೈಶಾಲಿ ಸುರೇಶ ಶೆಟ್ಟಿ, ಜಯಂತಿ ಜಗನ್ನಾಥ ಶೆಟ್ಟಿ, ಡಾ|ಶಶಿಧರ ಡೋಂಗ್ರೆ, ಪಿ.ಎಚ್.ನಿತ್ಯಾನಂದ ಶೆಟ್ಟಿ, ಚಂದ್ರಶೇಖರ ಪಿ.ಕೆ., ಅನಿಲ್ ಕುಮಾರ್, ಆಡಳಿತಾಧಿಕಾರಿ ಅಳದಂಗಡಿ ಗ್ರಾಮ ಕರಣಿಕ ವಿಜೇತ್ ಜೈನ್, ಸಹ ಅರ್ಚಕ ಪ್ರಸನ್ನ ಮಯ್ಯ ಉಪಸ್ಥಿತರಿದ್ದರು.

ದೇವಳದ ನವೀಕರಣ ನಡೆಯುತ್ತಿದ್ದು ಸರಕಾರದಿಂದ ಇನ್ನಷ್ಟು ಅನುದಾನ ದೊರಕಿಸಿಕೊಡುವಲ್ಲಿ ಹಾಗೂ ಧಾರ್ಮಿಕ ಪರಿಷತ್ತಿನ‌ ವತಿಯಿಂದ ಅನುದಾನ ನೀಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ದೇವೇಂದ್ರ ಹೆಗ್ಡೆ ಭರವಸೆ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.