ಬೆಳ್ತಂಗಡಿ: ಅಬ್ಸಲ್ಯುಟ್ ಲರ್ನಿಂಗ್ ಅಕಾಡೆಮಿ ಪುತ್ತೂರು ವತಿಯಿಂದ ಜೆಇಇ, ನೀಟ್ ಹಾಗೂ ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ಪೂರ್ವತಯಾರಿ ಮತ್ತು ಅಧ್ಯಯನದ ಕುರಿತಾಗಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕಾರ್ಯಾಗಾರ ನಡೆಯಲಿದೆ.
ಈ ತರಬೇತಿಯು ಸೆ.16 ಮತ್ತು 17ರಂದು ಸಂಜೆ 6 ಗಂಟೆಗೆ ಆಯೋಜನೆಯಾಗಿದ್ದು, ವಿದ್ಯಾರ್ಥಿಗಳು ಟೀಚ್ಮಿಂಟ್ ಆಪ್ಲಿಕೇಶನ್ ಬಳಸಿ ಕ್ಲಾಸ್ರೂಮ್ ಐಡಿ 415363683 ಮೂಲಕ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.
ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳನ್ನು ಎದುರಿಸುವುದು ಅನಿವಾರ್ಯವಾಗಿದ್ದು , ಈ ಉಚಿತ ಕಾರ್ಯಾಗಾರ ಆಸಕ್ತರಿಗೆ ಉಪಯುಕ್ತವಾಗಲಿದೆ.
ಹೆಚ್ಚಿನ ಮಾಹಿತಿಗಳಿಗಾಗಿ 9902740569 ಮತ್ತು 9448722839 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.